ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾಟ್ಸಾಪ್ ಬ್ರಾಡ್ ಕಾಸ್ಟ್ ಮೆಸೇಜ್ ಗೆ ಚಾಲನೆ
Thumbnail
ಕಾಪು : ಇಲ್ಕಲ್ ಕೆಂಪು ಶಿಲೆಯಿಂದ ನವೀಕೃತ ವಾಗಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ದೇವಳದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಭಕ್ತಾದಿಗಳಿಗೆ ತ್ವರಿತವಾಗಿ ತಿಳಿಯುವಂತೆ ಮಾಡಲು ಈವರೆಗೆ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಉಪ ಸಮಿತಿಗಳಾದ ಪ್ರಚಾರ ಸಮಿತಿ ಮತ್ತು ಆರ್ಥಿಕ ಸಮಿತಿಯ ಮುಖಾಂತರ ಸಂಗ್ರಹಿಸಲಾದ 36,000 ಕ್ಕೂ ಅಧಿಕ ವಾಟ್ಸಾಪ್ ನಂಬರ್ ಗಳಿಗೆ ಏಕಕಾಲದಲ್ಲಿ ಬ್ರಾಡ್ ಕಾಸ್ಟ್ ಮೆಸೇಜ್ ಹಾಕಲಾಯಿತು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ಸುನೀಲ್. ಎಸ್. ಪೂಜಾರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವೀಂದ್ರ.ಎಮ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಕಾಲರಾತ್ರಿ ತಂಡದ ಸಂಚಾಲಕರಾದ ಶ್ರೀನಿವಾಸ ಆಚಾರ್ಯ, ಸಿಬ್ಬಂದಿ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
20 Oct 2021, 06:24 PM
Category: Kaup
Tags: