141 ಸೇವಾಯೋಜನೆಗಳನ್ನು ಯಶಸ್ವಿಯಾಗಿಸಿದ ವೀರಕೇಸರಿ ಬೆಳ್ತಂಗಡಿ ಸಂಘಟನೆ
Thumbnail
ಮಂಗಳೂರು : ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ‌ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 5 ವರ್ಷ 6 ತಿಂಗಳುಗಳಲ್ಲಿ 141 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿತು. ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 6ನೇ ವರ್ಷದ ಪಯಣದಲ್ಲಿ 4 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗಮಾತ್ರ ಗೊಂದಲ,ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾಧ್ಯ. ಅಂದು ಅಡಿಗರು ಆಡಿದ ಮಾತು ಕಟ್ಟುವೆವು ನಾವು ಹೊಸದು ನಾಡೊಂದನ್ನ ರಸದ ಬೀಡೊಂದನ್ನ ಬಿಸಿ ನೆತ್ತರು ಉಕ್ಕುಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸದು ನಾಡೊಂದನ್ನು ರಸದ ಬೀಡೊಂದನ್ನು ಎಂಬ ಮಾತಿನಂತೆ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದೆ. 138ನೇ ಸೇವಾಯೋಜನೆಯಾಗಿ ಕಾಪು ತಾಲೂಕಿನ‌ ಪಡುಬೆಳ್ಳೆ ಧರ್ಮಶ್ರೀ ಕಾಲೋನಿ ಶ್ರೀಮತಿ ಸರಸ್ವತಿ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಗಳನ್ನು ಹಸ್ತಾಂತರಿಸಲಾಯಿತು. 139ನೇ ಸೇವಾಯೋಜನೆಯಾಗಿ ಕಾರ್ಕಳ ತಾಲೂಕಿನ ಪಡುಕುಡೂರಿನ ಸುಜಾತ ಇವರ ಮಗ ಅಂಗವಿಕಲನಾಗಿದ್ದು ಹಾಗೂ ಇವರ ಆರ್ಥಿಕ ಸಂಕಷ್ಟವನ್ನು ಕಂಡು ಇವರ ಕುಟುಂಬಕ್ಕೆ 15,000 ರೂಗಳನ್ನು ಹಸ್ತಾಂತರಿಸಲಾಯಿತು. 140ನೇ ಸೇವಾಯೋಜನೆಯಾಗಿ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ , ಆಶಾ ಭಂಡಾರಿ ಇವರ ಗಂಡ ತೀರಿಕೊಂಡಿದ್ದು ಹಾಗೂ ಇವರ ಮನೆಯಲ್ಲಿ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು ಮತ್ತು ಇವರ ಮಗಳು ಸ್ಪಂದನಾಳ ವಿಧ್ಯಾಭ್ಯಾಸಕ್ಕಾಗಿ 15,000 ರೂಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. 141ನೇ ಸೇವಾಯೋಜನೆಯಾಗಿ ಉಡುಪಿ ಜಿಲ್ಲೆಯ ಪಕ೯ಳ ಭೂಮಿಕ ಇವರ ತಂದೆ ತೀರಿಕೊಂಡಿದ್ದು ಹಾಗೂ ಇವರ ಅಜ್ಜ ಅನಾರೋಗ್ಯದಿಂದ ಇದ್ದು .ಮನೆಯಲ್ಲಿ ತೀರಾ ಕಷ್ಟದ ಪರಿಸ್ಥಿತಿಯಲ್ಲಿದ್ದು.ಇವರ ತಂಗಿ ಜಾಹ್ನವಿಯ ವಿಧ್ಯಾಭ್ಯಾಸಕಾಗಿ 15,000 ರೂಗಳನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ 4 ಸೇವಾಯೋಜನೆಗಳಿಗೆ ಮತ್ತು ತುರ್ತು ಸೇವೆಗಾಗಿ ಒಟ್ಟು ₹60,000 ರೂ ಗಳನ್ನು ವೀರಕೇಸರಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಈ ಯೋಜನೆಯ ಯಶಸ್ಸಿನೊಂದಿಗೆ ಸಂಘಟನೆಯು 141 ಸೇವಾಯೋಜನೆಗಳನ್ನು ತಲುಪಿದ್ದು ತಂಡದ ಸದಸ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳೆ ದೊಡ್ಡ ಮನೆ ಅಜಿತ್ ಪಿ ಶೆಟ್ಟಿ ಪಡುಬೆಳ್ಳೆ, ಪಡುಬೆಳ್ಳೆ ವಿಶ್ವ ಹಿಂದೂ ಪರಿಷತ್ ಸ್ಧಾಪಕ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಪಡುಬೆಳ್ಳೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಶಿವ೯ ವಲಯ ಸುಧೀರ್ ಸೋನು, ಕಾಪು ಬಜರಂಗದಳ ಪ್ರಖಂಡ ಸಂಚಾಲಕರಾದ ಕೃಷ್ಣ ಮೂತಿ೯, ಲೆಕ್ಕ ಪರಿಶೋದಕರು ಮತ್ತು ತೆರಿಗೆ ಸಲಹೆಗಾರರು ಮಧುಗಿರಿ ತುಮಕೂರು ಜಿಲ್ಲೆಯ ಪರಶುರಾಮ ಭಟ್, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ್ ವಾಗ್ಲೆ, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಶೆಟ್ಟಿ, ವೀರ ಕೇಸರಿ ಬೆಳ್ತಂಗಡಿ ಸಂಚಾಲಕರು ಹಾಗೂ ವೀರಕೇಸರಿ ಬೆಳ್ತಂಗಡಿ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
Additional image Additional image Additional image
02 Nov 2021, 09:11 AM
Category: Kaup
Tags: