ಕಾಪು ಬ್ಲಾಕ್ ಕಾಂಗ್ರೆಸ್ , ಹಿಂದುಳಿದ ವರ್ಗಗಳ ಘಟಕ, ಯುವ ಕಾಂಗ್ರೆಸ್ ವತಿಯಿಂದ ದೀಪಾವಳಿ ಅಚರಣೆ ಹಾಗು ಉಭಯ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ
ಕಾಪು : ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಗೂಡುದೀಪಗಳನ್ನು ಸಹಕಾರ ಪದ್ದತಿಯಲ್ಲಿ ಎಲ್ಲರೂ ಸೇರಿ ರಚಿಸುತ್ತಿದ್ದರು. ಇದೀಗ ಗೂಡುದೀಪಗಳನ್ನು ನವನವೀನ ರೀತಿಯಲ್ಲಿ ಅಧುನಿಕ ಶ್ಯೆಲಿಯಲ್ಲಿ ರಚಿಸಲಾಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೆರುಗು ತರುವ ದೀಪವೇ ಗೂಡುದೀಪಗಳು. ನಮ್ಮ ಸಾಂಪ್ರದಾಯಿಕ ಸಂಸ್ಕೃತಿಗಳನ್ನು ಉಳಿಸಲು ಇಂತಹ ಕಾರ್ಯಕ್ರಮಗಳನ್ನ ಹಮ್ಮಿಕೂಳ್ಳುವ ಮೂಲಕ ಯುವಜನತೆ ಒಲವು ತೋರಿಸುವ ಅಗತ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಹೇಳಿದರು.
ಅವರು ಕಾಪು ಬ್ಲಾಕ್ ಕಾಂಗ್ರೆಸ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಹಾಗು ಕಾಪು ಬ್ಲಾಕ್ ಹಿಂದುಳಿದ ವರ್ಗ ಘಟಕದ ವತಿಯಿಂದ ಕಾಪು ರಾಜೀವ ಭವನದ ಮುಂಭಾಗದಲ್ಲಿ ನಡೆದ ದೀಪಾವಳಿ ಆಚರಣೆ ಹಾಗು ಗೂಡುದೀಪ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೀಡಿ ಮಾತನಾಡಿದರು.
ಈ ಸಂದರ್ಭ ಕನ್ನಡ ಕಿರುತರೆ ನಟಿ ಅನ್ವಿತಾ ಸಾಗರ್ ಹಾಗು ಚಿತ್ರಕಲಾ ಕಲಾವಿದೆ ರಕ್ಷಾ ಪೂಜಾರಿ ಕಾಪು, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಫಾರೂಕ್ ಚಂದ್ರನಗರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಭಯ ಜಿಲ್ಲೆಗಳಿಂದ ಸುಮಾರು 40 ಗೂಡುದೀಪ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಗೂಡು ದೀಪ ಸ್ಪರ್ಧೆ ಯ ವಿಜೇತರು ಪ್ರಥಮ- ರಕ್ಷಿತ್ ಕುಮಾರ್ ಉರ್ವಸ್ಟೋರ್ ಮಂಗಳೂರು , ದ್ವಿತೀಯ - ಅಶೋಕ್ ಉರ್ವಸ್ಟೋರ್ ಮಂಗಳೂರು, ತೃತೀಯ - ಯಶವಂತ್ ಕಾವೂರು, ಚತುರ್ಥ - ವಿಠಲ್ ಭಟ್ ಕಾರ್ ಸ್ಟ್ರೀಟ್ ಮಂಗಳೂರು, ಪಂಚಮ - ಮಂಗಳೂರು ಆರ್ಟ್ ಪ್ಯೊಂಟ್ ಬಜ್ಪೆ ಹಾಗು ವಿಶೇಷ ಬಹುಮಾನ ಜಗದೀಶ್ ಅಮೀನ್ ಸುಂಕದಕಟ್ಟೆ ಬಜ್ಪೆ , ದೀಪಕ್ ಕೋಟ್ಯಾನ್ ಹೆಜಮಾಡಿ ಪಡೆದು ಕೊಂಡರು.
ಮಂಗಳೂರು ಶಾರದ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಯಾನಂದ್ ಕಟೀಲ್ , ಪ್ರಾಧ್ಯಾಪಕರಾದ ರಮಾನಂದ್ ಮಂಗಳೂರು ಹಾಗು ಪರಿಸರ ತಜ್ಞೆ ರೂಪ ವಸುಂಧರ ತೀರ್ಪುಗಾರರಾಗಿ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕೊ-ಆರ್ಡಿನೇಟರ್ ದೇವಿಪ್ರಸಾದ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶರ್ಪುದ್ದೀನ್ ಶೇಕ್, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಸುಧಾಕರ್ ಸಾಲ್ಯಾನ್, ಶಶಿಕಾಂತ್ ಅಚಾರ್ಯ, ವಿನೋದ್ ಮಾರ್ಟಿಸ್, ಅಶ್ವಿನಿ ಬಂಗೇರರವರನ್ನು ಗೌರವಿಸಲಾಯಿತು.
ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ದೀಪಕ್ ಎರ್ಮಾಳ್ ಸ್ವಾಗತಿಸಿ, ರಾಜೇಶ್ ಶೇರಿಗಾರ್ ನಿರೂಪಿಸಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ವಂದಿಸಿದರು.
