ಬಿರುವೆರ್ ಕುಡ್ಲ ಮೂಲ್ಕಿ ಘಟಕದ 49ನೇ ಸೇವಾ ಯೋಜನೆಯಾಗಿ ದೀಪಾವಳಿ ಸಂಭ್ರಮ-2021
Thumbnail
ಮೂಲ್ಕಿ : ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಆಶ್ರಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಆರ್ಥಿಕವಾಗಿ ಅಶಕ್ತ ಎರಡು ಕುಟುಂಬದೊಂದಿಗೆ ದೀಪಾವಳಿ ಸಂಭ್ರಮ ಆಚರಿಸಲಾಯಿತು. ಮನೆಯ ಹಿರಿಯರು ಹಣತೆ ದೀಪ ಬೆಳಗಿಸಿದರು. ಅವರೊಂದಿಗೆ ಘಟಕದ ಸದಸ್ಯರೂ ಹಣತೆ ದೀಪ ಬೆಳಗಿಸಿದರು. ದೀಪಾವಳಿಗೆ ಬೇಕಾದ ದಿನಸಿಯೊಂದಿಗೆ ಒಂದು ತಿಂಗಳ ದಿನಸಿ ಸಾಮಗ್ರಿ, ಸೀರೆ, ಸಿಹಿತಿಂಡಿಯನ್ನು ಮನೆಗೆ ನೀಡಲಾಯಿತು. ಘಟಕದ ಸದಸ್ಯರು ಆ ಮನೆಯ ಕುಟುಂಬದ ಸದಸ್ಯರಂತೆ ಅವರೊಂದಿಗೆ ದೀಪ ಬೆಳಗಿ, ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು. ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ಮಾತನಾಡಿ ಬಿರುವೆರ್ ಕುಡ್ಲದ ಸೇವಾ ಚಟುವಟಿಕೆಯನ್ನು ತಿಳಿಸಿ, ಈ ಕುಟುಂಬದೊಂದಿಗೆ ಮುಂದಿನ ದಿನಗಳಲ್ಲೂ ನಾವಿದ್ದೇವೆ ಎಂಬ ಭರವಸೆ ನೀಡಿದರು. ಉಪಾಧ್ಯಕ್ಷರಾದ ಕಿಶೋರ್ ಪಡುಬೈಲ್, ಉಮೇಶ್ ಮಾನಂಪಾಡಿ, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಜೊತೆ ಕಾರ್ಯದರ್ಶಿ ರಕ್ಷಿತ್ ಕೊಳಚಿಕಂಬ್ಲ, ಸಂಘಟನ ಕಾರ್ಯದರ್ಶಿ ಕಿರಣ್ ಬರ್ಕೆ, ಅಶೋಕ್ ಜನನಿ , ಘಟಕದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿ, ಮಾಧವ ಪೂಜಾರಿ ಕಿಲ್ಪಾಡಿ ವಂದಿಸಿದರು.
Additional image
03 Nov 2021, 11:45 PM
Category: Kaup
Tags: