ಕಟಪಾಡಿಯ ಜಾದುಗಾರ ಬಾಲಪ್ರತಿಭೆ ಪ್ರಥಮ್ ಕಾಮತ್ ಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ - 2021
ಕಟಪಾಡಿ : ಕಾರ್ಕಳ ತಾಲೂಕು ಅಜೆಕಾರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಮಾಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಪ್ರಶಸ್ತಿಗೆ ಕಟಪಾಡಿಯ ಜಾದುಗಾರ ಬಾಲಪ್ರತಿಭೆ ಕಾಮತ್ ಆಯ್ಕೆಯಾಗಿರುತ್ತಾರೆ.
ಕಟಪಾಡಿ ಎಸ್ ವಿ ಎಸ್ ಶಾಲೆಯ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರಥಮ್ ಕಾಮತ್ ಕಟಪಾಡಿಯ ರಂಗಕರ್ಮಿ ನಾಗೇಶ್ ಕಾಮತ್ ಮತ್ತು ಸುಜಾತ ಕಾಮತ್ ಇವರ ಪುತ್ರ.
ಈ ಬಾರಿ 30 ಮಕ್ಕಳು ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಕ್ಕೆ ಪಾತ್ರರಾಗಿದ್ದಾರೆ.
ನವೆಂಬರ್ 14, ಮಧ್ಯಾಹ್ನ 2 ಗಂಟೆಯಿಂದ ಅಜೆಕಾರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವ ಪ್ರದಾನಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷರಾದ ಡಾ.ಶೇಖರ ಅಜೆಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
