ಕಟಪಾಡಿ: ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ಮಹಿಳಾ ಬಳಗದ ವತಿಯಿಂದ ದೀಪ ಪೂಜೆ, ಗಣ್ಯರಿಗೆ ಸಮ್ಮಾನ
ಕಟಪಾಡಿ: ಕಾಳಿಕಾಂಬಾ ವಿಶ್ವಕರ್ಮೆಶ್ವರ ಮಹಿಳಾ ಬಳಗದ ವತಿಯಿಂದ ದೀಪ ಪೂಜೆ, ಗಣ್ಯರಿಗೆ ಸಮ್ಮಾನ ಸಮಾರಂಭವು ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ದೇವಸ್ಥಾನದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಚನದೊಂದಿಗೆ ಶುಕ್ರವಾರ ಜರಗಿತು.
ದೀಪವು ಜ್ಞಾನದ ಸಂಕೇತ. ದೀಪ ಪೂಜೆಯ ಮೂಲಕ ಜ್ಞಾನದ ಸಂಕೇತವಾದ ಬೌದ್ಧಿಕ ದೀಪವು ಬೆಳಗಲ್ಪಟ್ಟಿದೆ. ಅದನ್ನು ನಿತ್ಯ ಆಚರಿಸುವ ಮೂಲಕ ಬದುಕನ್ನು ನಂದಾದೀಪವನ್ನಾಗಿಸಿಕೊಳ್ಳುವಂತೆ ಪೂಜ್ಯ ಸ್ವಾಮೀಜಿ ಅವರು ಕರೆ ನೀಡಿದರು.
ಸಮಾರಂಭದಲ್ಲಿ ಪತ್ರಕರ್ತ ವಿಜಯ ಆಚಾರ್ಯ ಉಚ್ಚಿಲ, ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್, ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಆಚಾರ್ಯ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು
ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮಾರ್ಗದಶನದಲ್ಲಿ ದೀಪ ಪೂಜೆ ನೆರವೇರಿದ್ದು, ದೀಪ ಜ್ಞಾನವನ್ನು ಬೆಳಗಿಸಿ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಬೌದ್ಧಿಕ್ ನಡೆಸಿಕೊಟ್ಟರು.
ಈ ಸಂದರ್ಭ ಮಹಿಳಾ ಬಳಗದ ಅಧ್ಯಕ್ಷೆ ಶಾಲಿನೀ ಶಿವರಾಮ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದೀಪಾ ಸುರೇಶ್ ಆಚಾರ್ಯ, ಕೋಶಾಧಿಕಾರಿ ದೀಪಾ ಪ್ರಶಾಂತ್ ಆಚಾರ್ಯ, ಉಪಾಧ್ಯಕ್ಷೆ ಜ್ಯೋತೀ ರಮೇಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಶಕುಂತಳಾ ಪ್ರಭಾಕರ್, ಮಹಿಳಾ ಬಳಗದ ಸದಸ್ಯರು, ದೇಗುಲದ ಎರಡನೇ ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಮೂರನೇ ಮೊಕ್ತೇಸರ ದಾಮೋದರ ಎಲ್. ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಬಿಳಿಯಾರು ಗಣಪತಿ ಆಚಾರ್ಯ ಸ್ವಾಗತಿಸಿ, ಸುರೇಶ್ ಡಿ. ಆಚಾರ್ಯ ನಿರೂಪಿಸಿ, ಶಾಲಿನೀ ಶಿವರಾಮ ಆಚಾರ್ಯ ವಂದಿಸಿದರು.
