ಉಂಡಾರು : ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ರಜತ ಆರತಿಗಳ ಸಮರ್ಪಣೆ
Thumbnail
ಕಾಪು : ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶನಿವಾರ ಉದಯಾಸ್ತಮಾನ ಭಜನಾ ಸಹಿತ ದೀಪೋತ್ಸವ ನಡೆಯಿತು. ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಭಕ್ತಾದಿಗಳ ಸೇವೆಯ ಸಹಕಾರದಿಂದ ರಜತ ಆರತಿಗಳನ್ನು ಶ್ರೀದೇವರಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯ, ಚಂದ್ರಹಾಸ ಗುರುಸ್ವಾಮಿ, ರವಿವರ್ಮ ಶೆಟ್ಟಿ, ಉದಯ ಶೆಟ್ಟಿ ಅಣ್ಣಪ್ಪ ಸೌಂಡ್ಸ್ ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.
14 Nov 2021, 01:56 PM
Category: Kaup
Tags: