ವೈದ್ಯಕೀಯ ಪ್ರಕೋಷ್ಠದ ಕಾಯ೯ ಅಭಿನಂದನೀಯ : ಸಚಿವ ವಿ. ಸುನಿಲ್ ಕುಮಾರ್
ಉಡುಪಿ : ಉಡುಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ರೋಟರಿ ಆಸ್ಪತ್ರೆ ಕೆಎಂಸಿ ಆಸ್ಪತ್ರೆ ಮಣಿಪಾಲ ಇದರ ಸಂಯುಕ್ತ ಆಶ್ರಯದಲ್ಲಿ ಬಜಗೋಳಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.
ಕಾಯ೯ಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ, ಇಂಧನ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಆರೋಗ್ಯವೇ ಭಾಗ್ಯವೆಂಬಂತೆ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ. ವೈದ್ಯಕೀಯ ಪ್ರಕೋಷ್ಠದಿಂದ ಉತ್ತಮ ಕಾಯ೯ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆಯನ್ನು ಸಂಘಟಕ ಹಾಗೂ ವೈದ್ಯಕೀಯ ಪ್ರಕೋಷ್ಠ ದ ತಾಲೂಕು ಸಂಚಾಲಕ ಡಾ.ರಾಮದಾಸ್ ಹೆಗ್ಡೆ ವಹಿಸಿದ್ದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ, ಕಣ್ಣು, ಚಮ೯ ರೋಗ ಸೇರಿದಂತೆ ವಿವಿಧ ವಿಭಾಗದಲ್ಲಿ ಸುಮಾರು 400 ಜನರು ಪ್ರಯೋಜನ ಪಡೆದರು.
ವೇದಿಕೆಯಲ್ಲಿ ರೋಟರಿ ಆಸ್ಪತ್ರೆಯ ಡಾ.ಚಿದಾನಂದ ಕುಲಕಣಿ೯, ಜಿಲ್ಲಾ ಸಂಚಾಲಕ ಡಾ. ರಾಮಚಂದ್ರ ಕಾಮತ್, ಗ್ರಾ.ಪಂ ಅಧ್ಯಕ್ಷ ಸುರೇಶ್, ಶಾಲಾ ಮುಖ್ಯ ಶಿಕ್ಷಕರು ಮತ್ತು ವೈದ್ಯರು ಉಪಸ್ಥಿತರಿದ್ದರು.
