ಸಹಕಾರಿ ರಂಗವು ಜನರ ಮತ್ತು ಸಂಸ್ಥೆಯ ನಂಬಿಕೆಯ ಮೇಲೆ ನಿಂತಿದೆ : ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಪಡುಬಿದ್ರಿ : ಸಹಕಾರಿ ರಂಗವು ಜನರ ಮತ್ತು ಸಂಸ್ಥೆಯ ನಂಬಿಕೆಯ ಮೇಲೆ ನಿಂತಿದೆ. ಹಣಕಾಸು ಸಂಸ್ಥೆಯು ನಿರ್ಧಿಷ್ಟ ಜವಾಬ್ದಾರಿಗಳಿಂದ ಜನರಿಗೆ ನೆರವಾಗುವ ಮೂಲಕ ಧರ್ಮ ಕರ್ಮ ಸಿದ್ದಾಂತದ ಮೇಲೆ ನಿಂತಿದೆ ಎಂದು ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಪಡುಬಿದ್ರಿ ಕಣ್ಣಂಗಾರ್ ಬೈಪಾಸ್‌ನಲ್ಲಿ ಕರ್ಕೇರ ಟವರ್ ನಲ್ಲಿ ಇರುವ ಸ್ವರ್ಣ ಸೌಹಾರ್ದ ಕ್ರೆಡಿಟ್ ಕೋ ಒಪರೇಟಿವ್ ಲಿಮಿಟೆಡ್ ಇದರ ದಶಮ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಮ್ಮಾನ : ಬ್ರಹ್ಮ ಬೈದರ್ಕಳ ಗರಡಿ ಪಾತ್ರಿಗಳಾದ ಕೋಟಿ ಪೂಜಾರಿ ಸೂಡ, ಗುರುರಾಜ ಪೂಜಾರಿ, ಗರಡಿ ಪೂಜಾ ಅರ್ಚಕರಾದ ಗಿರಿಧರ ಪೂಜಾರಿ, ಸದಾನಂದ ನಾಯ್ಗ, ಕೃಷಿ ಕ್ಷೇತ್ರದ ಪೂವಪ್ಪ ಪೂಜಾರಿ, ಸಾಮಾಜಿಕ ಕ್ಷೇತ್ರದ ಗಂಗಾಧರ ಪೂಜಾರಿ, ರಾಜು, ಬಿಎಸ್‌ಎನ್ ಎಲ್ ಸಿಬಂದಿ ಪ್ರೇಮಾನಂದ್, ನಿವೃತ್ತ ಸಿಇಒಗಳಾದ ಎಚ್.ವಿ. ಶೆಣೈ, ಶೀಶ ತಂತ್ರಿ, 36 ಮಂದಿ ಆಶಾ ಕಾರ್ಯಕರ್ತೆಯರು, ವಿವಿಧ ಸಾಧಕರು, ಬ್ಯಾಂಕ್‌ನ ನಿರ್ದೇಶಕ ಮಂಡಳಿ, ಪ್ರಬಂಧಕರು, ಸಿಬಂದಿ ವರ್ಗದವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹೆಜಮಾಡಿ ಕಣ್ಣಂಗಾರು, ಜುಮ್ಮಾ ಮಸೀದಿಯ ಆಡಳಿತಾಧಿಕಾರಿ ಕೆ.ಎಮ್.ಕೆ ಮಂಜನಾಡಿ, ಎರ್ಮಾಳ್ ಸೆಕ್ರೇಡ್ ಹಾರ್ಟ್ ಚಚ್೯ನ ಧರ್ಮಗುರುಗಳಾದ ರೆ| ಫಾ| ಜೊಸ್ವಿ ಫೆರ್ನಾಂಡೀಸ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಬೆಂಗಳೂರಿನ ನಿರ್ದೇಶಕರಾದ ಮಂಜುನಾಥ ಎಸ್.ಕೆ. ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸ್ವರ್ಣ ಸೌಹಾರ್ದ ಕ್ರೆಡಿಟ್ ಕೋ ಒಪರೇಟಿವ್ ಲಿಮಿಟೆಡ್ ಇದರ ನಿರ್ದೇಶಕರು, ಸಿಬಂದಿ ವರ್ಗ, ಸಂಸ್ಥೆಯ ಗ್ರಾಹಕರು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ವೈ. ಸುಧೀರ್ ಕುಮಾರ್ ಸ್ವಾಗತಿಸಿ, ಸ್ವರ್ಣ ಸೌಹಾರ್ದ ಕ್ರೆಡಿಟ್ ಕೋ-ಒಪರೇಟಿವ್ ಸೌಹಾರ್ದ ಲಿಮಿಟೆಡ್‌ನ ಅಧ್ಯಕ್ಷ ಶೇಖರ್ ಕೆ. ಕರ್ಕೇರ ಪ್ರಸ್ತಾವನೆಗೈದು, ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಕಾರ್ಯಕ್ರಮ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅಮೀನ್ ವಂದಿಸಿದರು.
