ಕರ್ನಾಟಕ ರಾಜ್ಯಾದ್ಯಂತ ಸಂಚರಿಸಲಿರುವ ಶ್ರೀರಾಮ ಭಕ್ತ ಹನುಮಂತನ ಭಕ್ತಿ ವೈಭವ ವಿಜಯ ರಥಯಾತ್ರೆ ಕೋಟೇಶ್ವರದಲ್ಲಿ
Thumbnail
ಕುಂದಾಪುರ : ಜಗದ್ಗುರು ಆಚಾರ್ಯರ ಮಾರ್ಗದರ್ಶನದಲ್ಲಿ ಪಂಪಾ ಕ್ಷೇತ್ರದ ಗೋವಿಂದಾನಂದ ಸರಸ್ವತೀ ಸ್ವಾಮಿ ನೇತೃತ್ವದಲ್ಲಿ ಭಾರತಾದ್ಯಂತ 12 ವರ್ಷಗಳ ಕಾಲ ಸಂಚರಿಸುವ ಐತಿಹಾಸಿಕ ಶ್ರೀಹನುಮದ್ ಜನ್ಮಭೂಮಿ ಅಂಜನಾದ್ರಿ ಕಿಷ್ಕಿಂದ ಪಂಪಾ ಕ್ಷೇತ್ರದಿಂದ ಹೊರಟ ಶ್ರೀರಾಮ ಭಕ್ತ ಹನುಮಂತನ ಭಕ್ತಿ ವೈಭವ ವಿಜಯ ರಥಯಾತ್ರೆಯು ಕೋಟೇಶ್ವರ ತಲುಪಿದೆ. ಕರ್ನಾಟಕ ರಾಜ್ಯಾದ್ಯಂತ 1 ವರ್ಷಗಳ ಕಾಲ 1008 ಗ್ರಾಮಗಳು, 108 ಪಟ್ಟಣಗಳಿಂದ ಒಟ್ಟು 6 ಸಾವಿರ ಕಿ.ಮಿ. ದೂರ ಈ ರಥ ಸಂಚರಿಸಲಿದೆ. ಕಿಷ್ಕಿಂದ ಕ್ಷೇತ್ರದಲ್ಲಿ 215 ಮೀ. ಎತ್ತರದ ಹನುಮಂತ ದೇವರ ದಿವ್ಯ ವಿಗ್ರಹ ಮತ್ತು ಹನುಮದ್ ಜನ್ಮಭೂಮಿ ದೇವಸ್ಥಾನದ ಮಂದಿರ 12 ವರ್ಷಗಳ ಸಮಯದಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. 52ನೇ ವರ್ಷದ ಕೊಡಿ ಹಬ್ಬದ ಸಂಭ್ರಮದಲ್ಲಿರುವ ರಾಮನಾಥಗೋಳಿ ಕಟ್ಟೆಫ್ರೆಂಡ್ಸ್ ಕೋಟೇಶ್ವರ ಇವರ ವೇದಿಕೆಯ ಮುಂಭಾಗದಲ್ಲಿ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಸಹಕಾರದೊಂದಿಗೆ ರಥ 3 ದಿನಗಳ ಕಾಲ ಇಲ್ಲಿಯೇ ಉಳಿಯಲಿದೆ. ಈ ರಥವು ಕೋಟೇಶ್ವರ ಜಾತ್ರೆಯ ಮೆರುಗನ್ನು ಹೆಚ್ಚಿಸಲಿದೆ.
18 Nov 2021, 03:21 PM
Category: Kaup
Tags: