ರೋಟರಿ ಶಂಕರಪುರಕ್ಕೆ ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಭೇಟಿ
Thumbnail
ಕಟಪಾಡಿ : ರೋಟರಿ ಶಂಕರಪುರಕ್ಕೆ ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಎಮ್ ಜಿ ರಾಮಚಂದ್ರ ಮೂರ್ತಿ ಇವರು ಅಧಿಕೃತ ಭೇಟಿ ನೀಡಿ ಹಲವಾರು ಸಮಾಜ ಮುಖಿ ಕಾರ್ಯಕ್ರಮವನ್ನು ವೀಕ್ಷಿಸಿ ಉದ್ಘಾಟಿಸಿದರು. ಈ ಸಂದರ್ಭ ರೋಟರಿ ಶಂಕರಪುರದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ಮಾಡಿದರು. ಸಮಾಜ ಸೇವಕ ಕಿಶೋರ್ ಇವರನ್ನು ಸನ್ಮಾನ ಮಾಡಲಾಯಿತು. ಇನ್ನಂಜೆ ಪಾಂಗಾಳ ಮತ್ತು ಶಂಕರಪುರದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ಉತ್ತಮ ಅಂಕ ಪಡೆದುಕೊಂಡ 12 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3182 ರ ಪ್ರಥಮ ಮಹಿಳೆ ಸುರೇಖಾ ಮೂರ್ತಿ, ವಲಯ 5 ರ ಅಸಿಸ್ಟೆಂಟ್ ಗವರ್ನರ್ ಡಾ ಅರುಣ್ ಹೆಗ್ಡೆ, ವಲಯ ಸೇನಾನಿ ಅನಿಲ್ ಡೇಸಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಂಕರಪುರ ಅಧ್ಯಕ್ಷರು ಆದ ಪ್ಲಾವಿಯಾ ಮೆನೆಜಸ್ ವಹಿಸಿಕೊಂಡು ಎಲ್ಲರನ್ನು ಸ್ವಾಗತಿಸಿ, ಕಾರ್ಯದರ್ಶಿ ಮಾಲಿನಿ ಶೆಟ್ಟಿ ಇನ್ನಂಜೆ ವಂದಿಸಿದರು. ಕಾರ್ಯಕ್ರಮವನ್ನು ನವೀನ್ ಅಮೀನ್ ನಿರೂಪಿಸಿ, ಕಾರ್ಯದರ್ಶಿ ಮಾಲಿನಿ ಶೆಟ್ಟಿ ಇನ್ನಂಜೆ ವಂದಿಸಿದರು.
Additional image Additional image Additional image
21 Nov 2021, 12:40 PM
Category: Kaup
Tags: