ರೋಟರಿ ಕ್ಲಬ್ ಸೈಬ್ರಕಟ್ಟೆ : ವಿದ್ಯುತ್ ಬಳಕೆ, ಸುರಕ್ಷತೆ,ಗ್ರಾಹಕರ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಗಾರ
Thumbnail
ಕುಂದಾಪುರ : ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಸ್ವಾಗತ್ ಮಿನಿ ಹಾಲ್ ನಲ್ಲಿ,ತಿಂಗಳ ರೋಟರಿ ಸ್ನೇಹ ಸೌಹಾರ್ದ ಭೋಜನ ಕೂಟದಲ್ಲಿ ಹೊಸ ಸದಸ್ಯ ಸೇರ್ಪಡೆ,ಸನ್ಮಾನ ಮತ್ತು ವಿದ್ಯುತ್ ಬಳಕೆ,ಸುರಕ್ಷತೆ,ಗ್ರಾಹಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಗಾರ ಕಾರ್ಯಕ್ರಮ ಜರಗಿತು. ಮಾಹಿತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮೆಸ್ಕಾಂ ಉಡುಪಿ ಇದರ ಎಇಇ ಪ್ರಾಣೇಶ್ ಮಾತನಾಡಿ ವಿದ್ಯುತ್ ಎಷ್ಟು ಉಪಯೋಗಕಾರಿ ಯಾಗಿದ್ದರು ಜಾಗೃತೆ ತಪ್ಪಿದರೆ ಅಪಾಯ ಖಚಿತ, ಅಲ್ಲದೆ ಮನೆ ಅಥವಾ ಇನ್ನಿತರ ಕಟ್ಟಡಗಳಲ್ಲಿ ಸುರಕ್ಷತೆಗಾಗಿ ಉತ್ತಮ ದರ್ಜೆಯ ವಯರ್ ಹಾಗೂ ಸ್ವಿಚ್ ಬಳಸಿ ವಯರಿಂಗ್ ಮಾಡಿಸಿ ಹಾಗೂ ಸರಿಯಾದ ಕ್ರಮದಲ್ಲಿ ಉತ್ತಮ ಗ್ರೌಂಡ್ ಅರ್ಥಿಂಗ್ ಕೊಡುವುದರಿಂದ ಮಾತ್ರ ಗೃಹಬಳಕೆಯ ವಿದ್ಯುತ್ ಉಪಕರಣಗಳ ಸುರಕ್ಷತೆ ಸಾಧ್ಯ ಅಂತ ಹೇಳಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮೆಸ್ಕಾಂ ಶಿರಿಯಾರದ ಜೆಇ ವೈಭವ ಶೆಟ್ಟಿ ಮಾತನಾಡಿ ಯಾವುದೇ ವ್ಯಕ್ತಿಗೆ ವಿದ್ಯುತ್ ಅಪಘಾತವಾದಾಗ ತಕ್ಷಣಕ್ಕೆ ಹೋಗಿ ಆ ವ್ಯಕ್ತಿಯನ್ನು ಸ್ಪರ್ಶ ಮಾಡಬಾರದು ಮೈನ್ ಸ್ವಿಚ್ ಆಫ್ ಮಾಡಿ ಪ್ಲಾಸ್ಟಿಕ್ ಅಥವಾ ಒಣ ಮರದ ತುಂಡಿನಿಂದ ವ್ಯಕ್ತಿಯನ್ನು ವಿದ್ಯುತ್ ತಂತಿಯಿಂದ ಬೇರ್ಪಡಿಸಿ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಬೇಕು. ನೀರನ್ನು ಕುಡಿಸಬಾರದು ಅಂತ ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಓರ್ವ ಹೊಸ ಸದಸ್ಯ ಮಂಜುನಾಥ್ ಎಮ್. ಅವರನ್ನು ಮಾಜಿ ಸಹಾಯಕ ಗವರ್ನರ್ ಮಹೇಶ್ ಕುಮಾರ್ ರೋಟರಿ ಪಿನ್ ತೋಡಿಸಿ ಸೇರ್ಪಡೆ ಗೊಳಿಸಿದರು.ತದನಂತರ ಮೆಸ್ಕಾಂ ಸೈಬ್ರಕಟ್ಟೆಯ ಮೇಲ್ವಿಚಾರಕರಾದ ಉಮೇಶ್ ಬಿ. ಅವರನ್ನು ವಲಯ 3 ರ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ಅತಿಥಿಗಳೊಡಗೂಡಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಪ್ರಸಾದ್ ಭಟ್ ವಹಿಸಿದ್ದು, ವಲಯ ಸೇನಾನಿ ವಿಜಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯದಾಸ್, ವರದರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Additional image
22 Nov 2021, 02:31 PM
Category: Kaup
Tags: