ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ದ್ವಿತೀಯ ವಾರ್ಷಿಕ ಮಹಾಸಭೆ
ಕಾಪು : ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸಂಫದ ದ್ವಿತೀಯ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹರೀಶ್ಚಂದ್ರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 21 ರಂದು ಶ್ರೀ ದುರ್ಗಾ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ಶಿವಾನಂದ ಆಚಾರ್ಯ ಮತ್ತು ಉಪಾಧ್ಯಕ್ಷರಾದ ದೇವರಾಜ್ ಬಿ ಶೆಟ್ಟಿಯವರು ಭಾಗವಹಿಸಿದರು.
ಲತಾ ಆಚಾರ್ಯರವರು ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಂಘವು ಯುವಕರನ್ನು ಸೇರಿಸಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸಿ ಸರಕಾರದಿಂದ ಸಿಗುವ ಸವಲತ್ತುಗಳ ಪ್ರಯೋಜನ ಪಡೆಯುವರೇ, ಈ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ಆಗುತ್ತದೆ ಎಂದು ಸಭೆಗೆ ತಿಳಿಸಿದರು.
ಇನ್ನೊರ್ವ ಅತಿಥಿ ದೇವರಾಜ್ ಶೆಟ್ಟಿಯವರು ಮಾತನಾಡಿ ಪಂಚಾಯತ್ ಮೂಲಕ ಮತ್ತು ಸರಕಾರದ ಮಟ್ಟದಲ್ಲಿ ಸಿಗುವ ಅನುದಾನ ಇತರೆ ಅಭಿವೃದ್ಧಿ ಕೆಲಸಗಳಿಗೆ ಸದಾ ನಿಮ್ಮೊಂದಿಗೆ ಇದ್ದು ಸಹಕರಿಸುವ ಭರವಸೆ ನೀಡಿದರು. ಪ್ರಾಸ್ತಾವಿಕವಾಗಿ ಸದಾಶಿವ ಆಚಾರ್ಯರವರು ಸಂಘದ ಮತ್ತು ಶ್ರೀ ದುರ್ಗಾಮಂದಿರದ ವಿವರಗಳನ್ನು ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು, ಮತ್ತು ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕಾಪು ಜಯರಾಮ ಆಚಾರ್ಯರು ವರದಿ ವಾಚಿಸಿದರು. ಗಂಗಾಧರ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಕಾಶ್ ಆಚಾರ್ಯ, ಮಾಧವ ಎಸ್ ಆಚಾರ್ಯ,ಚಂದ್ರಯ್ಯ ಪಿ ಆಚಾರ್ಯ,
ಶ್ರೀಮತಿ ಆಚಾರ್ಯ,ಅಚ್ಚುತ್ತ ಆಚಾರ್ಯ,ಪ್ರವೀಣ್ ಆಚಾರ್ಯ,ದಿನೇಶ್,ರತ್ನಾಕರ ಆಚಾರ್ಯ,ಸರ್ವ ಸದ್ಯಸರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುರೇಶ್ ಆಚಾರ್ಯ ಸ್ವಾಗತಿಸಿ,ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಶಶಿರಾಜ್ ಆಚಾರ್ಯ ವಂದಿಸಿದರು.
