ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಪಾಲೆತ್ತಾಡಿಯನ್ನು ಗೌರವಿಸಿದ ನಳಿನ್ ಕುಮಾರ್ ಕಟೀಲ್, ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು : ಕರ್ನಾಟಕ ಸರಕಾರದ 66ನೇ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' - 2021 ಪುರಸ್ಕೃತರಾದ ಹೊರನಾಡ ಕನ್ನಡಿಗ, ಮುಂಬಯಿ 'ಕರ್ನಾಟಕ ಮಲ್ಲ' ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ನ. 21ರಂದು ಸಂಸದ, ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಹೊರ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳೆಸುವಲ್ಲಿ ಪಾಲೆತ್ತಾಡಿಯವರ ಕಾರ್ಯ ಶ್ಲಾಘನೀಯ. ಅವರ ಸೇವಾ ಕಾರ್ಯಗಳು ಅವಿರತವಾಗಿ ಸಾಗಲಿ ಎಂದು ಹಾರೈಸಿದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೂ ಪಾಲೆತ್ತಾಡಿಯವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ನವೀನ್ ಕೆ. ಇನ್ನ, ಮುಂಬಯಿ ಮುಲುಂಡ್ ಫ್ರೆಂಡ್ಸ್‌ನ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ನಮನ ಫ್ರೆಂಡ್ಸ್‌ನ ಸ್ಥಾಪಕ ಪ್ರಭಾಕರ್ ಬೆಳುವಾಯಿ, ವಾಸ್ತುತಜ್ಞ ಪಂಡಿತ್ ನವೀನ್‌ಚಂದ್ರ ಸನಿಲ್ ಉಪಸ್ಥಿತರಿದ್ದರು.
