ಕಾರಣಿಕ ತೋರಿದ ದೈವ - ಕಳವುಗೈದ ಚಿನ್ನಾಭರಣವನ್ನು ಕೊಂಡೊಯ್ಯಲಾಗದೆ ಗಂಟುಕಟ್ಟಿ ಇಟ್ಟ ದರೋಡೆಕೋರರು
Thumbnail
ಉಡುಪಿ : ದೊಡ್ಡನಗುಡ್ಡೆ ಗುಂಡಿಬೈಲು ಪಂಚ ಧೂಮಾವತಿ ದೈವಸ್ಥಾನದ ಹಿಂಭಾಗದಲ್ಲಿ ಬಾಬುರಾವ್ ಆಚಾರ್ಯರವರ ಮನೆಯ ಚಿನ್ನಾಭರಣ ಕಳವಾದಾಗ ಪಂಚ ಧೂಮಾವತಿ ದೈವದ ಮೊರೆ ಹೋಗಿದ್ದರು. ಘಟನೆ ನಡೆದ ಎರಡು ದಿವಸದಲ್ಲಿ ದರೋಡೆಕೋರರು ಸಿಕ್ಕಿಬಿದ್ದಿದ್ದು ಚಿನ್ನಾಭರಣವು ಮತ್ತೆ ಅವರ ಕೈ ಸೇರುವಂತಾಗಿದೆ. ಪಂಚ ಧೂಮಾವತಿ ದೈವವು ತನ್ನ ಗಡುವಾಡು ಸ್ಥಳದಲ್ಲಿ ದರೋಡೆ ಮಾಡಿದ ಚಿನ್ನವನ್ನು ದರೋಡೆಕೋರರು ತೆಗೆದುಕೊಂಡು ಹೋಗದಂತೆ ಮಾಡಿತ್ತು. ಈ ಸಂದರ್ಭ ಮರದ ಅಡಿಯಲ್ಲಿ ಗಂಟುಕಟ್ಟಿ ಇಟ್ಟಿದ್ದರು ಎಂದು ಪೊಲೀಸರ ವಿಚಾರಣೆಯ ಸಂದರ್ಭ ಬಾಯ್ಬಿಟ್ಟಿದ್ದರು. ತುಳುನಾಡಿನ ದೈವ ದೇವರು ಯಾವುದೇ ಸಮಯದಲ್ಲಿ ಭಕ್ತರ ಕೈಬಿಡುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಈ ಬಗ್ಗೆ ಪಂಚ ಧೂಮಾವತಿ ದೈವಸ್ಥಾನದ ಗುರಿಕಾರರಾದ ನಿತಿನ್ ಕುಮಾರ್, ಪ್ರಧಾನ ಅರ್ಚಕರಾದ ವಿನೋದ್ ಶೆಟ್ಟಿ ಮಾಹಿತಿ ನೀಡಿದರು.
Additional image
22 Nov 2021, 07:14 PM
Category: Kaup
Tags: