ಕುತ್ಯಾರು ವಿದ್ಯಾದಾಯಿನಿ ಹಿರಿಯಪ್ರಾಥಮಿಕ ಶಾಲೆಗೆ ಅವಕಾಶ್ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ಕೊಡುಗೆ
Thumbnail
ಕಾಪು : ಕುತ್ಯಾರು ಶ್ರೀಪಾದ್ ಹೆಗ್ಡೆಯವರು ಆಡಳಿತ ನಿರ್ದೇಶಕರಾಗಿರುವ ಸ್ವಯಂ ಸೇವಾ ಸಂಸ್ಥೆ ಅವಕಾಶ್ ಫೌಂಡೇಶನ್ ವತಿಯಿಂದ ಸ್ಥಳೀಯ ಕುತ್ಯಾರು ವಿದ್ಯಾದಾಯಿನಿ ಹಿರಿಯಪ್ರಾಥಮಿಕ ಶಾಲೆಗೆ ಕಲಿಕೆಗೆ ಪೂರಕವಾಗಿ ಒಂದು ವರ್ಷದ ಉಚಿತ ಇಂಟರ್ನೆಟ್ ಸೌಲಭ್ಯದ ಸಹಿತ ಎರಡು ಕಂಪ್ಯೂಟರ್ ಹಾಗೂ ಒಂದು ಲಾಪ್ ಟಾಪ್ ಗಳ ಕೊಡುಗೆಯನ್ನು ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಕುಲಾಲ್ ಅವರು ವಹಿಸಿದ್ದರು. ಶ್ರೀಪಾದ್ ಹೆಗ್ಡೆ ಯವರ ತಂದೆ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರೂ ಆಗಿರುವ ಪಾಂಡುರಂಗ ಹೆಗ್ಡೆ, ಶೃಂಗಾರಿ ಹೆಗ್ಡೆ ದಂಪತಿಗಳು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಅಂಜಾರುಮನೆ ಕಿಶೋರ್ ಶೆಟ್ಟಿ , ಸ್ಥಳೀಯ ಪಂಚಾಯತ್ ಸದಸ್ಯರಾದ ಸಂಪತ್ ಕುಮಾರ್ ಕೇಂಜ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಊರಿನ ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷ ಧೀರಜ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ, ಆಶಾ ಚಂದ್ರಹಾಸ ಶೆಟ್ಟಿ, ಶ್ರೀನಾಥ್ ಹೆಗ್ಡೆ , ಉಲ್ಲಾಯ ಫ್ರೆ೦ಡ್ಸ್ ಅಧ್ಯಕ್ಷ ಅಜಿತ್ ಶೆಟ್ಟಿ, ಶಾಲಾ ಶಿಕ್ಷಕ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶರ್ಮಿಳಾ ಅವರು ಸ್ವಾಗತಿಸಿ, ಶಿರ್ವ ಸಿ.ಎ ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಸವಿತಾ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಗೂ ವಂದನಾರ್ಪಣೆಯನ್ನು ಶಿಕ್ಷಕಿಯರಾದ ಸುಪ್ರೀತ ಹಾಗೂ ಕುಸುಮ ಅವರು ನಿರ್ವಹಿಸಿದರು.
Additional image
24 Nov 2021, 07:38 PM
Category: Kaup
Tags: