ಯುವವಾಹಿನಿ ಅಡ್ವೆ ಘಟಕದ ಪದಗ್ರಹಣ
ಪಡುಬಿದ್ರಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಅಡ್ವೆ ಘಟಕದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇಲ್ಲಿ ಜರಗಿತು.
ಸಮಾರಂಭವನ್ನು ನಿವೃತ್ತ ಶಿಕ್ಷಕರಾದ ಅಡ್ವೆ ರವೀಂದ್ರ ಪೂಜಾರಿ ಉದ್ಘಾಟಿಸಿದರು.
ಘಟಕದ ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಥಮ ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಪ್ರತಿಜ್ಞಾ ವಿಧಿ ಬೋಧಿಸಿದರು. ಘಟಕದ ಅಧ್ಯಕ್ಷರಾದ ಶಶಿಧರ ಟಿ. ಪೂಜಾರಿಯವರು ನಿಯೋಜಿತ ಅಧ್ಯಕ್ಷರಾದ ಅರುಣಾನಂದ ಕಿಶೋರ್ ಅವರಿಗೆ ಮತ್ತು ಘಟಕದ ಕಾರ್ಯದರ್ಶಿ ಭಾರತಿ ನಿಯೋಜಿತ ಕಾರ್ಯದರ್ಶಿ ಶರತ್ ಅಡ್ವೆಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಅಡ್ವೆ ಘಟಕದ ಅಧ್ಯಕ್ಷರಾದ ಶಶಿಧರ್ ಟಿ. ಪೂಜಾರಿ ವಹಿಸಿದ್ದರು. ಶ್ರೀ ಬ್ರಹ್ಮ ಬೈದರ್ಕಳ ಅಡ್ವೆ ಗರಡಿಯ ಮಹಾಪೋಷಕರಾದ ಸೂರ್ಯಕಾಂತ್ ಜಯ ಸುವರ್ಣ, ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಮಿತಿಯ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಮಂಗಳೂರು ಸಂಘಟನಾ ಕಾರ್ಯದರ್ಶಿ ಯೋಗೀಶ್ ಪೂಜಾರಿ ಪಾದೆಬೆಟ್ಟು, ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
