ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಚೌಕುಳಮಕ್ಕಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೆ ಉಚಿತ ಶುದ್ಧ ನೀರಿನ ಘಟಕ ಕೊಡುಗೆ
Thumbnail
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬೈಂದೂರು ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೌಕುಳಮಕ್ಕಿಗೆ ಭೇಟಿ ನೀಡಿ ಉಚಿತ ಶುದ್ಧ ನೀರಿನ ಘಟಕವನ್ನು ತಂಡದ ಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ನೀಡಲಾಯಿತು. ಈ ಕಾರ್ಯಕ್ರಮವು ಉದಯ ಪೂಜಾರಿ ಜಿಡ್ಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜೋಗ ಪೂಜಾರಿ, ಆಜ್ರಿ ಪಂಚಾಯತ್ ಸದಸ್ಯರುಗಳಾದ ಸುರೇಶ ಪೂಜಾರಿ, ಶಾರದಾ ಪೂಜಾರಿ ಹಾಗೂ ಆಸರೆ ತಂಡದ ಸ್ಥಾಪಕಾಧ್ಯಕ್ಷರಾದ ಡಾ. ಕೀರ್ತಿ ಪಾಲನ್, ಕೋಶಾಧಿಕಾರಿ ಜಗದೀಶ್ ಬಂಟಕಲ್, ತಂಡದ ಸದಸ್ಯರಾದ ಬೇಬಿ ಶೆಟ್ಟಿ, ದಿನೇಶ್ ಬಿದ್ಕಲಕಟ್ಟೆ, ಮೋಕ್ಷ, ಶ್ಲೋಕ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಅನಿತಾರವರು ವಂದಿಸಿದರು.
05 Dec 2021, 10:26 PM
Category: Kaup
Tags: