ಸೃಜನಶೀಲತೆ, ಏಕಾಗ್ರತೆಯನ್ನು ಉದ್ದೀಪನಗೊಳ್ಳಲು, ಹಾಗೂ ಬದುಕನ್ನು ಅರಿತು ಜೀವನೋತ್ಸಾಹ ಬೆಳೆಸಲು ಚಿತ್ರಕಲೆ ಸಹಕಾರಿ : ಡಾ। ಯು.ಸಿ.ನಿರಂಜನ್
Thumbnail
ಮಣಿಪಾಲ : ಪ್ರಷಾ ಸೇವಾ ಟ್ರಸ್ಟ್ ಹಾಗೂ ತ್ರಿವರ್ಣ ಕಲಾಕೇಂದ್ರದ ಸಹಯೋಗದಲ್ಲಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ದಿವಂಗತ ಡಿ. ವಿ. ಶೆಟ್ಟಿಗಾರ್ ಸ್ಮರಣಾರ್ಥ 18 ವರ್ಷ ಮೇಲ್ಪಟ್ಟ ಕಲಾಸಕ್ತರಿಗಾಗಿ ಡಿಸೆಂಬರ್ 5ರಂದು ಪ್ರಶಾವರ್ಣ - 2021 ಉಚಿತ ಒಂದು ದಿನದ ಚಿತ್ರಕಲಾ ಕಾರ್ಯಾಗಾರ ಜರಗಿತು. ಕಾರ್ಯಾಗಾರವನ್ನು ಡಾ। ಯು. ಸಿ. ನಿರಂಜನ್, ನಿರ್ದೇಶಕರು ಚಿತ್ರಕಲಾ ವಿದ್ಯಾಮಂದಿರ, ಉಡುಪಿ ಉದ್ಘಾಟಿಸಿ, ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಉದ್ದೀಪನಗೊಳ್ಳಲು, ಹಾಗೂ ಬದುಕನ್ನು ಅರಿತು ಜೀವನೋತ್ಸಾಹ ಬೆಳೆಸಲು ಚಿತ್ರಕಲೆ ಸಹಕಾರಿಯಾಗಿತ್ತದೆ ಎಂದು ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಗೌರವಾನ್ವಿತ ಅತಿಥಿಗಳಾದ ಸುರೇಂದ್ರ ನಾಯಕ್, ಟ್ರಸ್ಟೀ, ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್, ಹಾಗೂ ಮಂಜುನಾಥ್ ಮಣಿಪಾಲ, ಮುನ್ಸಿಪಾಲ್ ಕೌನ್ಸಿಲರ್ , ಉಡುಪಿ, ಇವರು ಮಾತನಾಡಿ ಶಿಭಿರಾರ್ಥಿಗಳನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸಿದರು. ಪ್ರಶಾ ಸೇವಾ ಟ್ರಸ್ಟ್ ನ ಅಧ್ಯಕ್ಷ ನಾಗರಾಜ ಕಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಜ್ಞಾರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅನುಷಾ ಆಚಾರ್ಯ ರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ತ್ರಿವರ್ಣ ಕಲಾಕೇಂದ್ರದ ನಿರ್ದೇಶಕರಾದ ಹರೀಶ್ ಸಾಗಾ ಅವರು ಶಿಬಿರದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಟ್ರಸ್ಟ್ ನ ಕಾರ್ಯದರ್ಶಿ ಡಾ। ವಸುಧಾ ದೇವಿ ಕಾರ್ಯಕ್ರಮ ನಿರ್ವಹಿಸಿದರು. ಶರಣ್ಯಾ ವಂದನಾರ್ಪಣೆಗೈದರು. ಚಿತ್ರಕಲೆ ಪ್ರಾಥಮಿಕ ಜ್ಞಾನ ಹಾಗೂ ರಚನೆ, ಮತ್ತು ಪೆನ್ಸಿಲ್ ಶೇಡಿಂಗ್ ಕುರಿತು ತ್ರಿವರ್ಣ ಕಲಾಕೇಂದ್ರದ ನಿರ್ದೇಶಕರಾದ ಹರೀಶ್ ಸಾಗಾ ತರಬೇತಿ ನೀಡಿದರು. ಮಣಿಪಾಲ, ಉಡುಪಿ, ಬಂಟ್ವಾಳ , ಕಾಪು , ಮತ್ತು ಮಂಗಳೂರಿನಿಂದ ಒಟ್ಟು 3೦ ಮಂದಿ ಚಿತ್ರಕಲಾ ಶಿಬಿರದ ಪ್ರಯೋಜನ ಪಡೆದುಕೊಂಡರು .
Additional image Additional image
05 Dec 2021, 11:35 PM
Category: Kaup
Tags: