'ತುಳುನಾಡಿನ ಪ್ರಾಣಿ ಜಾನಪದ' ಗ್ರಂಥ ಲೋಕಾರ್ಪಣೆ
Thumbnail
ಪಡುಬಿದ್ರಿ : ಇಲ್ಲಿನ ಸಿರಿ ಕಮಲ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಡಾ.ಅಶೋಕ ಆಳ್ವ ಅವರ ಸಂಶೋಧನ ಗ್ರಂಥ 'ತುಳುನಾಡಿನ ಪ್ರಾಣಿ ಜಾನಪದ' ಡಿಸೆಂಬರ್ 11 ರಂದು ಸಂಜೆ 5 ರಿಂದ ಪಡುಬಿದ್ರಿಯ ಬಂಟರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಹಾವೇರಿಯ ಜಾನಪದ ವಿ.ವಿ.ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯ ಸಮಾರಂಭದಲ್ಲಿ‌ ವಿಶ್ರಾಂತ ಕುಲಪತಿ , ತುಳು - ಕನ್ನಡ ವಿದ್ವಾಂಸರಾದ ಪ್ರೊ ಬಿ.ಎ. ವಿವೇಕ ರೈ ಗಂಥ ಲೋಕಾರ್ಪಣೆ ಮಾಡಲಿರುವರು. ಲೇಖಕರು,ಹಿರಿಯ ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣು ಭಟ್ಟ ಅವರು ಕೃತಿ ಪರಿಚಯಿಸುವರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ, ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿರುವರು ಎಂದು ಗ್ರಂಥ ಪ್ರಕಾಶಕರಾದ , ವಿಶ್ವಸ್ಥರು ಕಮಲ ಶೆಡ್ತಿ ಚಾರಿಟೇಬಲ್ ಟ್ರಸ್ಟ್ ನ ಡಾ.ವೈ ಎನ್.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
07 Dec 2021, 02:26 PM
Category: Kaup
Tags: