ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾಗಿ ಮಲ್ಪೆ ಎಮ್ ಮಹೇಶ್ ಕುಮಾರ್ ಆಯ್ಕೆ
ಉಡುಪಿ : ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ (ರಿ.) ಬೆಂಗಳೂರು ಇದರ ನೇತೃತ್ವ ದಲ್ಲಿ ರಾಜ್ಯ ದ 31 ಜಿಲ್ಲೆಗಳ ಎಲ್ಲಾ ಮುದ್ರಣ ಮಾಲಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆ ಆಗಿದ್ದು ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಂಘದ ಅಧ್ಯಕ್ಷರು ಅಶೋಕ್ ಕುಮಾರ್ ಮತ್ತು ಮಾಜಿ ರಾಷ್ಟ್ರಧ್ಯಕ್ಷರು ಪ್ರಸ್ತುತ ಪ್ರಿಂಟ್ ಕ್ಲಸ್ಟರ್ ನ ಅಧ್ಯಕ್ಷರು ಆದ ಸಿ ಆರ್ ಜನಾರ್ಧನ್ ಹಾಗೂ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಅಧಿಕೃತವಾಗಿ ನೇಮಕ ಮಾಡಿದರು.
ಸಭೆಯಲ್ಲಿ ಹೆಚ್ಚಿನ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
