ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಗೆ ಸನ್ಮಾನ
ಮುಂಬಯಿ : ಮುಂಬಯಿ ಮಹಾನಗರ ಹಾಗೂ ಉಪನಗರಗಳ ಲ್ಲಿನ ಕರಾವಳಿ ಜಿಲ್ಲೆಗಳ ತುಳು ಕನ್ನಡಿಗರ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪ್ರಮುಖರು ಅಧಿಕ ಸಂಖ್ಯೆಯಲ್ಲಿ ಸೇರಿದ್ದು ಇವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ 4 ಗಣ್ಯರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಈ ರೀತಿ ನಾವೆಲ್ಲರೂ ಒಂದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಹಿಂದಿನಂತೆ ಮುಂದೆಯೂ ಕರಾವಳಿಯ ನಮ್ಮ ಜಿಲ್ಲೆಗಳ ಅಭಿವೃದ್ದಿಗಾಗಿ ಮತ್ತಷ್ಟು ಕ್ರೀಯಾಶೀಲರಾಗೋಣ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನಿರ್ಗಮನ ಅಧ್ಯಕ್ಷರೂ, ಸಮಿತಿಯ ಸಂಸ್ಥಾಪಕರೂ ಆದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಅಭಿಪ್ರಾಯ ಪಟ್ಟರು.
ನ. 5 ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಸಭಾಗೃಹದಲ್ಲಿ ನಡೆದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಸನ್ಮಾನ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಳಿಕ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಮುಂಬಯಿಯ ಖ್ಯಾತ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ, ಸಮಾಜ ಸೇವಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸುರೇಶ್ ರಾವ್ ಮತ್ತು ಜನಪ್ರಿಯ ಪತ್ರಕರ್ತ ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಯವರನ್ನು ಸನ್ಮಾನಿಸಿ ಮಾತನಾಡುತ್ತಾ ಸಮಿತಿಯ ಕಾರ್ಯದ ಬಗ್ಗೆ ಸಂಕ್ತಿಪ್ತವಾಗಿ ಮಾತನಾಡುತ್ತಾ ಸಮಿತಿಯ ಮಾರ್ಗದರ್ಶಕರಾಗಿದ್ದ ದಿ. ಜೋರ್ಜ ಫೆರ್ನಾಂಡಿಸ್ ಹಾಗೂ ಅಗಲಿನ ಇನ್ನಿತರ ಗಣ್ಯರ ಸಹಕಾರ ಹಾಗೂ ಪ್ರೋತ್ಸಾಹವನ್ನು ನೆನಪಿಸಿಕೊಂಡರು. ಈ ಸಲ ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಡಾ. ಬಿ. ಎಂ. ಹೆಗ್ದೆ ಇಂದು ಈ ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಮುಂದೆ ಅವರನ್ನು ಸನ್ಮಾನಿಸಲಿರುವೆವು. ಎಲ್ಲಾ ಸಮುದಾಯದವರು ಒಂದು ಕೊಡೆಯಡಿಯಲ್ಲಿದ್ದಂತೆ ನೂತನ ಅಧ್ಯಕ್ಷರಾದ ಎಲ್. ವಿ. ಅಮೀನ್ ಹಾಗೂ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯು ಮುಂದೆಯೂ ಸರಿಯಾದ ಹಾದಿಯಲ್ಲಿ ಮುನ್ನಡೆಯುದರೊಂದಿಗೆ ಜಿಲ್ಲೆಗಳ ಅಭಿವೃದ್ದಿ ಕಾರ್ಯವು ಭರದಿಂದ ಸಾಗಲಿದೆ ಎಂದರು.
ವೇದಿಕೆಯಲ್ಲಿದ್ದ ಉಪಸ್ಥಿತರಿದ್ದ ಗಣ್ಯರಾದ ಸಮಿತಿಯ ಸಂಸ್ಥಾಪಕ ಜಯಕೃಷ್ಣ ಶೆಟ್ಟಿ ತೋನ್ಸೆ. ನೂತನ ಅಧ್ಯಕ್ಷ ಎಲ್ ವಿ ಅಮೀನ್ .ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ , ಉಪಾಧ್ಯಕ್ಷ ಗಳಾದ. ಪಿ ಧನಂಜಯ ಶೆಟ್ಟಿ , ನಿತ್ಯಾನಂದ. ಡಿ ಕೋಟ್ಯಾನ್ ಸಿ ಎ. ಐ ಆರ್ ಶೆಟ್ಟಿ , ರಾಮಚಂದ್ರ ಗಾಣಿಗ , ಜಿ ಟಿ ಆಚಾರ್ಯ, ಜತೆ ಕಾರ್ಯದರ್ಶಿ ದೇವದಾಸ್ ಕುಲಾಲ್ , ಮಾತ್ರವಲ್ಲದೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ. ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ . ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ. ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಕಾರ್ಯಧ್ಯಕ್ಷ ಎನ್. ಟಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬೈಯ ಅಧ್ಯಕ್ಷ ಹರೀಶ್ ಜಿ.ಅಮೀನ್, ಬಿಲ್ಲವರ ಅಸೋಸಿಯೇಶನ್ ನ ಉಪಾಧ್ಯಕ್ಷ ಜಯಂತಿ ಉಳ್ಳಾಲ್. ಪರಿಸರ ಪ್ರೇಮಿ ಸಮಿತಿಯ ಜೊತೆ ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ . ಜೊತೆ ಕೋಶಾಧಿಕಾರಿ ಸಂಜೀವ ಪೂಜಾರಿ ತೋನ್ಸೆ ಹಾಗೂ ಇನ್ನಿತರ ಗಣ್ಯರು ಸನ್ಮಾನಿತರನ್ನು ಶಾಲು ಹೊದಿಸಿ, ಪೇಟಾ ಧರಿಸಿ, ಸ್ಮರಣಿಕೆ ನೀಡಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪರವಾಗಿ ಸನ್ಮಾನಿಸಿದರು.
ಸಮಿತಿಯ ಉಪಾಧ್ಯಕ್ಷರುಗಳಾದ ನಿತ್ಯಾನಂದ ಕೋಟ್ಯಾನ್, ಜಿ. ಟಿ ಆಚಾರ್ಯ, ಸಿಎ. ಐ. ಆರ್ ಶೆಟ್ಟಿ ಮತ್ತು ಪರಿಸರಪ್ರೇಮಿ ಸಮಿತಿ ವಕ್ತಾರ ದಯಾಸಾಗರ ಚೌಟ ಸನ್ಮಾನಿತರನ್ನು ಪರಿಚಯಿಸಿದರು.
ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ವಿವಿಧ ಜಾತಿಯ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು. ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸದಸ್ಯರು. ಹಿತೈಷಿಗಳು. ಉಪಸ್ಥರಿದ್ದರು
ಇದೇ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಬಿಲ್ಲವ ಸಮಾಜದ ಹಿರಿಯ ನಾಯಕ .ಭಾರತ್ ಬ್ಯಾಂಕಿನ ನಿರ್ದೇಶಕ .ಭಾರತೀಯ ಜನತಾ ಪಕ್ಷದ ಹಿರಿಯ .ನಾಯಕ ಎಲ್ ವಿ ಅಮೀನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಆಯ್ಕೆಗೊಂಡ ಎಲ್ ವಿ ಅಮೀನ್ ಅವರನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಹೂಗುಚ್ಛ ನೀಡಿ ಅಭಿನಂದಿಸಿದರು.
ಸನ್ಮಾನಿತರ ನುಡಿ :
ರಾಮಚಂದ್ರ ಬೈಕಂಪಾಡಿ ಮಾತನಾಡಿ, ಮುಂಬಯಿಯ ಸ್ವರಾಜ್ಯವನ್ನು ಆಳಿದವರು ನೀವು. ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಐದು ಮಂದಿ ಕರಾವಳಿಯವರು ಎನ್ನಲು ಅಭಿಮಾನ ವಾಗುತ್ತಿದೆ.
ಕರಾವಳಿಯ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಂಬಯಿ ತುಳು ಕನ್ನಡಿಗರ ಕೊಡುಗೆ ಇದ್ದೇ ಇದೆ. ತುಳುವರನ್ನು ಎಲ್ಲಿಯೂ ಗುರುತಿಸಬಹುದು. ಸಮಸ್ತ ಸಮುದಾಯದವರು ಸೇರಿ ತುಳು ನಾಡ ಅಭಿವೃದ್ದಿಗೊಳಿಸೋಣ. ಉಡುಪಿಯ ಶ್ರೀಕೃಷ್ಣ ನ ಆಶೀರ್ವಾದದಿಂದ ಪೇಜಾವರ ಶ್ರೀಗಳ ಹಸ್ತದಿಂದ ಸಮಿತಿ ಪ್ರಾರಂಭಗೊಂಡಿದೆ. ತೋನ್ಸೆ ಜಯಕೃಷ್ಣ ಶೆಟ್ಟಿಯವರ ನೇತ್ರುತ್ವದಲ್ಲಿ ನಡೆಯುತ್ತಾ ಬಂದಿರುವ ಹೋರಾಟದಿಂದ ಬಹಳ ಪ್ರಯೋಜನವಾಗಿದೆ. ನಾವು ಪರಿಸರ ವ್ಯಾದಿಗಳ ವಿರುದ್ದ ಹೋರಾಡುತ್ತೇವೆ. ಎಲ್ಲಾ ಸಮುದಾಯದವರು ಒಂದಾಗಿ ಮಾಡುತ್ತಿರುವ ಈ ಕೆಲಸ ನಿರಂತರವಾಗಿ ನಡೆಯಲಿ. ಇಂದು ಸನ್ಮಾನಿಸಿದ ಸಮಿತಿಯ ಎಲ್ಲರಿಗೂ ಕೃತಜ್ನತೆಗಳು ಎಂದರು.
ಡಾ. ಸುನೀತಾ ಎಂ. ಶೆಟ್ಟಿ ಮಾತನಾಡಿ,
ಇಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದಾರೆ. ನಾನು ಎಲ್ಲರ ಉಪಸ್ಥಿತಿಯಲ್ಲಿ ಸನ್ಮಾನ ಪಡೆಯುತ್ತಿರುವುದರಿಂದ ನನಗೆ ಇನ್ನ್ ಪ್ರತ್ಯೋಕ ಸನ್ಮಾನದ ಅಗತ್ಯವಿಲ್ಲ. ಈ ನಗರ ನನ್ನನ್ನು ಬೆಳೆಸಿದೆ. ಅದನ್ನು ನಾನು ಎಂದಿಗೂ ಮರೆಯಲಿಕ್ಕಿಲ್ಲ. ಈ ನಗರಕ್ಕೆ ಹಾಗೂ ಇಲ್ಲಿನ ಜನರಿಗೆ ನಾನು ಋಣಿ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಹೊಸ ಸಮಿತಿಗೆ ಅಭಿನಂದನೆಗಳು ಎಂದರು.
ಡಾ. ಸುರೇಶ್ ರಾವ್ ಮಾತನಾಡಿ, ಗಣ್ಯರ ಮಧ್ಯೆ ಸನ್ಮಾನ ಸ್ವೀಕರಿಸಲು ಸಂತೋಷವಾಗಿತ್ತಿದೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಅಭಿನಂದನೆಗಳು. ತಾಯ್ನಾಡಲ್ಲಿ ವೈದ್ಯಕೀಯ ಸೇವೆಗೆ ಸೂಕ್ತ ಅವಕಾಶ ನೀಡಿದಕ್ಕಾಗಿ ನನಗೆ ಈ ಪ್ರಶಸ್ತಿ ಬಂದಿಗೆ ಎನ್ನಬಹುದು. ಕಟೀಲಿನ ಪ್ರೊಜೆಕ್ಟ್ ಇಡೀ ದೇಶದಲ್ಲಿ ಹರಡುವಂತಾಗಲಿ. ಕಟೀಲಿನ ಎಲ್ಲಾ ಗ್ರಾಮದವರಿಗೆ ಸರಿಯಾದ ವೈದ್ಯಕೀಯ ಸೇವೆ ಸಿಗದೇ ಇದ್ದು ಜನರು ಪರದಾಡುತ್ತಿದ್ದು 70 ವರ್ಷಕ್ಕಿಂತ ಮೇಲ್ಪಟ್ಟದವರಿಗೆ ಹಾಗೂ ಬಡತನದ ರೇಖೆಗಿಂತ ಕೆಳಗಿದ್ದವರಿಗೆ ಪ್ರಯೋಜನಕಾರಿಯಾಗಲು ಕಟೀಲಿನಲ್ಲಿ ಈ ನೂತನ ಪ್ರೊಜೆಕ್ಟನ್ನು ಕೇವಲ ಎರಡೇ ವರ್ಷಗಳಲ್ಲಿ ಪೂರ್ಣಗೊಳಿಸಿದ್ದೇವೆ. ಇದು ದೇಶದಲ್ಲೇ ಒಂದು ಮಾದರಿ ವೈದ್ಯಕೀಯ ಕೇಂದ್ರವಾಗಲಿ. ಮುಂಬಯಿಯ ಬಿ.ಎಸ್.ಕೆ.ಬಿ. ಅಸೋಷಿಯೇಶನ್ ನಲ್ಲಿ ನೂತನ ಕೃಷ್ನ ಮಂದಿರ ನಿರ್ಮಾಣಗೊಳ್ಳುತ್ತಿದ್ದು ಎಲ್ಲರೂ ಸಯಾನ್ ಗೋಕುಲಕ್ಕೆ ಆಗಮಿಸಿ ದರ್ಶನ ಪಡೆಯಬೇಕು. ಈ ಧಾರ್ಮಿಕ ಸ್ಥಳವು ಎಲ್ಲರಿಗೂ ಸೇರಿದೆ ಎಂದರು.
ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ,
ನನಗೆ ಸಿಕ್ಕಿದ ಸನ್ಮಾನ ಹಾಗೂ ಪ್ರಶಸ್ತಿಯನ್ನು ಮಹಾನಗರದ ಎಲ್ಲಾ ತುಳು ಕನ್ನಡಿಗರಿಗೆ ಅರ್ಪಿಸುತ್ತಿದ್ದೇನೆ. ಎಂದೂ ಪ್ರಶಸ್ತಿಗಾಗಿ ಯೋಚಿಸದೆ ಕರ್ನಾಟಕ ಮಲ್ಲ ಪತ್ರಿಕೆಯನ್ನು ಬೆಳೆಸಿದ್ದೇನೆ. ನನ್ನಾ ಧೋರಣೆಯನ್ನು ನಾನು ಮುಂದುವರಿಸುತ್ತೇನೆ. ಯಾರ ಮೇಲೆ ದ್ವೇಶದಿಂದ ನಾನು ಎಂದಿಗೂ ಬರೆದಿಲ್ಲ. ಸಚಿವರಾದ ಸುನಿಲ್ ಕುಮಾರ್ ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಆಯ್ಕೆಮಾಡಿದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬಹಳ ಸಾಧನೆ ಮಾಡಿದೆ ಎಂದರು.
