ಕುವೈಟ್ : ರಕ್ತದಾನ ಶಿಬಿರ
ಕುವೈಟ್ : ಕನ್ನಡ ನಟ ಹಾಗೂ ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಕಾರ್ಯಗಳನ್ನು ಸ್ಮರಿಸಿ, ಗೌರವಿಸುವ ಸಲುವಾಗಿ ಕುವೈಟ್‌ನ ಭಾರತೀಯ ಪ್ರವಾಸಿ ಪರಿಷತ್ (ಬಿಪಿಪಿ) ಕರ್ನಾಟಕ ವಿಭಾಗ ಮತ್ತು ಬಿಡಿಕೆ ಕುವೈಟ್ ಜಂಟಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿತು.
ಶಿಬಿರವನ್ನು ಭಾರತ-ಕುವೈಟ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 60 ನೇ ವಾರ್ಷಿಕೋತ್ಸವ ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವನ್ನು ಆಚರಿಸುವ ಸಲುವಾಗಿಯೂ ಆಯೋಜಿಸಲಾಗಿತ್ತು.
ಆದಾನ್ ಕೊಅಪರೇಟಿವ್ ಬ್ಲಡ್ ಟ್ರಾನ್ಸ್‌ಫ್ಯೂಸನ್ ಸೆಂಟರ್‌ನಲ್ಲಿ ಡಿಸೆಂಬರ್ 3 ರಂದು ಮಧ್ಯಾಹ್ನ 1 ರಿಂದ 6 ರವರೆಗೆ ಶಿಬಿರ ನಡೆದಿದ್ದು, ಇದು ಕುವೈಟ್‌ನಲ್ಲಿರುವ ಭಾರತೀಯ ವಲಸಿಗರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ ಮತ್ತು ಸುಮಾರು 125 ದಾನಿಗಳು ರಕ್ತದಾನ ಮಾಡಿದ್ದಾರೆ.
