ಡಾ. ಅರುಣ್ ಉಳ್ಳಾಲ್ ಇವರಿಗೆ ನಾರಾಯಣಗುರು ಸಂಶೋಧನಾ ಪ್ರಶಸ್ತಿ
ಮಂಗಳೂರು : ಇಲ್ಲಿನ ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ 2021ರಿಂದ ಆರಂಭಗೊಂಡ 'ನಾರಾಯಣ ಗುರು ಸಂಶೋಧನಾ ಪ್ರಶಸ್ತಿ'ಗೆ ಉಪನ್ಯಾಸಕ, ಸಂಶೋಧಕ, ತುಳು, ಕನ್ನಡ ವಾಗ್ಮಿ ಡಾ. ಅರುಣ್ ಉಳ್ಳಾಲ್ ಇವರು ಆಯ್ಕೆಯಾಗಿದ್ದಾರೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ 'ಭಗವತಿ ಆರಾಧನೆ-ಸಾಂಸ್ಕೃತಿಕ ಅಧ್ಯಯನ' ವಿಷಯಾಧಾರಿತ ಪಿಹೆಚ್.ಡಿ. ಸಂಶೋಧನೆಗಾಗಿ ಉನ್ನತ 'ಡಾಕ್ಟರೇಟ್ ಪದವಿ', ಹಂಪಿ ವಿಶ್ವವಿದ್ಯಾನಿಲಯದಿಂದ 'ತುಳುನಾಡಿನ ಚರಿತ್ರೆ' ವಿಷಯದ ಸಂಶೋಧನೆಗಾಗಿ ಎಂ.ಫಿಲ್ ಪದವಿ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.

ಸಂಶೋಧನಾ ಪ್ರಶಸ್ತಿಯು 10 ಸಾವಿರ ರೂಪಾಯಿಗಳ ನಗದು ಮೊತ್ತವನ್ನು ಒಳಗೊಂಡಿದ್ದು ಪುರಸ್ಕೃತ ಕೃತಿಯು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರಧಾನ ಸಮಾರಂಭದಂದು ಬಿಡುಗಡೆಯಾಗಲಿದೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.