ಅಂತರ್ ರಾಜ್ಯ ಕಳ್ಳರ ಬಂಧನ : ಚಿನ್ನದ ಒಡವೆಗಳ ವಶ
ಸುರತ್ಕಲ್ : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಪಿ ಸಿ ಎಲ್ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜನ್ ಎಂಬುವವನನ್ನು ಸುರತ್ಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಕುಳಾಯಿ, ಕಾನ, ಹೊಸಬೆಟ್ಟು, ಕಡಂಬೋಡಿ ಕಡೆಗಳಲ್ಲಿ 2021 ನೇ ಇಸವಿಯ ಮನೆ ಕಳವು ಪ್ರಕರಣಗಳಲ್ಲಿ 4 ಪ್ರಕರಣಗಳ ಚಿನ್ನದ ಒಡವೆಗಳನ್ನು ಕಳವು ಮಾಡಿದ ಬಗ್ಗೆ ಮಾಹಿತಿಯನ್ನು ನೀಡಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಲಾಗಿತ್ತು.
ಬೆಂಗಳೂರಿನ ಚಂದಾಪುರದ ಕೀರ್ತಿ ಲೇ ಔಟಿನ ಪಿ.ಬಿ ಪ್ರಮೋದ್ ಎಂಬವನಿಗೆ ಸೇರಿದ ಲಕ್ಷ್ಮೀ, ಕೇರಳ ಮೆಸ್ ನ ರೂಮಿನಲ್ಲಿ ಆರೋಪಿ ರಾಜನ್ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ಸ್ವಾಧೀನಪಡಿಸಿ ಆರೋಪಿ ಪಿ.ಬಿ ಪ್ರಮೋದ್ ಎಂಬವನನ್ನು ವಶಕ್ಕೆ ಪಡೆದು ಆರೋಪಿ ರಾಜನ್ ಕಳವು ಮಾಡಿ ತಂದು ಕೊಟ್ಟಿರುವ ಚಿನ್ನದ ಒಡವೆಗಳ ಪೈಕಿ ಮಣಪುರಂ ಫೈನಾನ್ಸ್ ನಲ್ಲಿ ಅಡಮಾನ ಇರಿಸಿದ ಚಿನ್ನದ ಒಡವೆಗಳನ್ನು ಸ್ವಾಧೀನಪಡಿಸಿರುವುದಲ್ಲದೆ, ಆರೋಪಿ ರಾಜನ್ ಎಂಬವನ ಮನೆಯಾದ ತಮಿಳುನಾಡು ರಾಜ್ಯದ ಕೊಯಂಬತ್ತೂರು ಜಿಲ್ಲೆಯ ತೆಲ್ಲುಗುಮ್ ಪಾಳಯಂ ಎಂಬಲ್ಲಿ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 366.632 ಗ್ರಾಂ ಚಿನ್ನದ ಒಡವೆಗಳನ್ನು ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಕಳವು ಪ್ರಕರಣದ ಪ್ರಮುಖ ಆರೋಪಿ ರಾಜನ್ ಎಂಬಾತನು ಅಂತರ್ ರಾಜ್ಯ ಕಳ್ಳನಾಗಿದ್ದು, ಈತನ ಮೇಲೆ ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯದಲ್ಲಿ ಹಲವಾರು ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳ ಪತ್ತೆ ಕಾರ್ಯಾಚರಣೆಯು ಮಂಗಳೂರು ಮಾನ್ಯ ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರ ಮಾರ್ಗದರ್ಶನದಂತೆ, ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಪ್ಪ.ಕೆ, ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಕರಯ್ಯ, ಎ.ಎಸ್.ಐ ವಿನೋದ್, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಅಣ್ಣಪ್ಪ, ಅಜೀತ್ ಮ್ಯಾಥ್ಯು, ರಾಜೇಶ್ ಅತ್ತಾವರ, ವಕೀಲ್ ಲಮಾಣಿ, ಮಣಿಕಂಠ, ಬಸವರಾಜ್ ಯರಬಾಳು, ಮೋಹನ್ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.
