ಸೇನಾ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ, ಹಿಂದುಳಿದ ವರ್ಗಗಳ ಘಟಕ
ಕಾಪು : ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಹಾಗೂ ಕಾಪು ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ತಮಿಳ್ ನಾಡು ಕುನೂರ್ ಸಮೀಪ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ದುರ್ಮರಣ ಹೊಂದಿದಂತಹ ಜನರಲ್ ಬಿಪಿನ್ ರಾವತ್ ಹಾಗೂ ಇತರ 12ಮಂದಿಯ ಆತ್ಮ ಶಾಂತಿಗಾಗಿ ಶ್ರದ್ಧಾಂಜಲಿ ಸಭೆಯು ನಡೆಯಿತು.
ಈ ಸಂದರ್ಭ ಹೂ ಹಾಗೂ ದೀಪ ಹಚ್ಚಿ ಮೌನ ಪ್ರಾರ್ಥನೆ ಮಾಡಲಾಯಿತು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ದೀಪಕ್ ಎರ್ಮಾಳ್, ನವೀನ್ ಚಂದ್ರ ಜೆ ಶೆಟ್ಟಿ, ದಿವಾಕರ್ ಶೆಟ್ಟಿ ಕಾಪು, ನವೀನ್ ಎನ್ ಶೆಟ್ಟಿ, ಗಣೇಶ್ ಎನ್ ಕೋಟಿಯನ್, ಸಾರ್ಫುದ್ದಿನ ಶೇಕ್, ಇಮ್ರಾನ್ ಕಾಪು, ಮಹಮದ್ ಸಾಧಿಕ್, ಅಮೀರ್ ಕಾಪು, ಪ್ರಭಾ ಶೆಟ್ಟಿ, ದಿವಕರ್ ಡಿ ಶೆಟ್ಟಿ ಕಳತ್ತೂರು, ಬಿ ದಿವಾಕರ್ ಶೆಟ್ಟಿ, ಸುಧೀರ್ ಹೆಜಮಾಡಿ, ಪ್ರಭಾಕರ್ ಆಚಾರ್ಯ, ಸಂತೋಷ್ ಪಡುಬಿದ್ರಿ, ರಾಜೇಶ್ ಮೆಂಡನ್, ಮಧ್ವರಾಜ್ ಬಂಗೇರ, ಲೀಲಾ, ರೀನ ಡಿಸೋಜ ಹೆಜಮಾಡಿ, ಸುಧಾಕರ್ ಸಾಲಿಯಾನ್, ಚಂದ್ರಶೇಖರ್ ಕೈಪುಂಜಾಲ, ಶಾಬುಸಾಬ್, ಗಣೇಶ್ ಆಚಾರ್ಯ, ಸುಧೀರ್ ವೈ ಉಪಸ್ಥಿತರಿದ್ದರು.
