ಮಂಗಳೂರು : ರಿಯಾಝ್ ಎಂಬಾತನ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ
ಮಂಗಳೂರು ನಗರದಿಂದ 15 ಕಿ.ಮೀ ದೂರದ ಅಡ್ಯಾರ್ ಪದವಿನ ನಿವಾಸಿಯಾದ 38 ವರ್ಷದ ರಿಯಾಝ್ ಅಹ್ಮದ್ ಎಂಬಾತನ ಮೇಲೆ ನೀರುಮಾರ್ಗ ಪಡು ಪ್ರದೇಶದಲ್ಲಿ ರಾತ್ರಿ ಸುಮಾರು 9 ಗಂಟೆ ವೇಳೆಗೆ 5 ರಿಂದ 6 ಮಂದಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಮತ್ತು ಅವರ ರಿಟ್ಸ್ ಕಾರಿನ ಮೇಲು ಹಾನಿಯುಂಟು ಮಾಡಿದ್ದಾರೆ.
ತಲೆಗೆ ಸ್ವಲ್ಪ ಮಟ್ಟಿನಲ್ಲಿ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾದ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸುಮಾರು 200 ಮಂದಿ ಜಮಾಯಿಸಿದ್ದು, ಆಸ್ಪತ್ರೆ ಬಳಿ ಸುಮಾರು 100ಕ್ಕೂ ಅಧಿಕ ಮಂದಿ ಜಮಯಿಸಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 307 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
