ಜೀರ್ಣೋದ್ಧಾರಗೊಳ್ಳುತ್ತಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಪ್ರಧಾನ ಶಿಲಾ ದ್ವಾರದ ಸ್ಥಾಪನೆ
Thumbnail
ಕಟಪಾಡಿ, ಡಿ.11 : ಜೀರ್ಣೋದ್ಧಾರಗೊಳ್ಳುತ್ತಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಪ್ರಧಾನ ಶಿಲಾ ದ್ವಾರದ ಸ್ಥಾಪನೆಯು ಶುಕ್ರವಾರ ನೆರವೇರಿತು . ಧಾರ್ಮಿಕ ವಿಧಿ ವಿಧಾನಗಳು ತಂತ್ರಿಗಳಾದ ಮಹೇಶ್ ಶಾಂತಿ ಹೆಜ್ಮಾಡಿ ಇವರ ಪೌರೋಹಿತ್ಯದಲ್ಲಿ ಜರಗಿತು. ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ , ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಹಾಗೂ ಶಿಲಾ ಶಿಲ್ಪಿ ಸುಧೀರ್ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಶಿಲಾ ದ್ವಾರ ಸ್ಥಾಪನೆ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಂಗಾಧರ್ ಸುವರ್ಣ , ಗೌರವ ಸಲಹೆಗಾರ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್ ,ಅಧ್ಯಕ್ಷ ಅಶೋಕ್ ಎನ್ ಪೂಜಾರಿ ,ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಮುಂಬಯಿ ಸಮಿತಿಯ ಉಪಾಧ್ಯಕ್ಷ ವೀರಮಣಿ , ಗುರಿಕಾರರಾದ ದಾಮೋದರ್ ಪೂಜಾರಿ, ರಂಗ ಪೂಜಾರಿ , ಸೀನ ಪೂಜಾರಿ ,ಕೃಷ್ಣಪೂಜಾರಿ ರಮೇಶ್‌ ಜತ್ತನ್ನ , ಭೋಜ ಪೂಜಾರಿ, ಮುದ್ದು ಪೂಜಾರಿ, ಜಯ ಪೂಜಾರಿ , ಸೂರಪ್ಪ ಪೂಜಾರಿ, ನಾರಾಯಣ ಅಂಚನ್, ಗರಡಿ ಜವನೆರ್ ತಂಡದ ಸುಧೀರ್ ರಾಜ್ ಪೂಜಾರಿ ಹಾಗೂ ಪ್ರಮುಖರಾದ ಶಿಲ್ಪಾ ಜಿ ಸುವರ್ಣ ,ಆರ್ ಜಿ ಕೋಟ್ಯಾನ್ , ಮಹೇಶ್ ಪೂಜಾರಿ , ನಿರಂಜನ್ ಪೂಜಾರಿ ,ಚಂದ್ರಹಾಸ ಕೋಟ್ಯಾನ್ , ರಮೇಶ್ ಕೋಟ್ಯಾನ್ , ಶಿವ ಪ್ರಸಾದ್ ಮಹೇಶ್ ಅಂಚನ್, ಪ್ರಸಾದ್ ಬಂಗೇರ,ಆನಂದ ಪೂಜಾರಿ ,ವಿಠಲ್ ಪೂಜಾರಿ ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಆರು ಮಾಗಣೆಯ ಹತ್ತು ಸಮಸ್ತರು ಉಪಸ್ಥಿತರಿದ್ದರು.
11 Dec 2021, 10:31 AM
Category: Kaup
Tags: