ಏಕೊನೊಮಿಕ್ ಗ್ರೂಪ್ ಸೊಸೈಟಿ ಆಫ್ ಇಂಡಿಯಾ ನವದೆಹಲಿಯಿಂದ ನೀಡಲ್ಪಡುವ ಪ್ರಶಸ್ತಿಗೆ ದಿವಾಕರ ಬಿ ಶೆಟ್ಟಿ ಕಳತ್ತೂರು, ಮೊಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ ಡಿ ಶೆಟ್ಟಿ ಆಯ್ಕೆ
ಕಾಪು : ಏಕೊನೊಮಿಕ್ ಗ್ರೂಪ್ ಸೊಸೈಟಿ ಆಫ್ ಇಂಡಿಯಾ ನವದೆಹಲಿ ಇವರು ನೀಡಲಿರುವ ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗೆ ಕಾಪು ಪರಿಸರದ ನಿಸ್ವಾರ್ಥ ಸಮಾಜ ಸೇವಕರಾದ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಇವರನ್ನು ಗ್ಲೋರಿ ಆಫ್ ಇಂಡಿಯಾ ಅವಾರ್ಡ್, 2021ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರನ್ನು ಏಶಿಯ ಫೆಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ಹಾಗೂ ಉಭಯ ವೇದಿಕೆ ಸಂಚಾಲಕರು ಕೃಷಿಕರು, ಸಮಾಜ ಸೇವಕರು ಆದ ದಿವಾಕರ ಡಿ ಶೆಟ್ಟಿ ಸ್ಟಾರ್ ಆಫ್ ಏಶಿಯ ಅವಾರ್ಡ್ ಇವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 22 ರಂದು ನವದೆಹಲಿಯ ಪಂಚತಾರ ಹೋಟೆಲ್ ಪಾರ್ಕ್ ಯಂತ್ರ ಹಾಲ್ ನಲ್ಲಿ ಭಾರತದ ಉಪರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರು ಗಣ್ಯ ಉದ್ಯಮಿಗಳು ರಿಸರ್ವ್ ಬ್ಯಾಂಕ್ ನ ಗವರ್ನರ್ ಮಾಜಿ ಸಿ ಬಿ ಐ ಡೈರೆಕ್ಟರ್ ಇವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಏಕೊನೊಮಿಕ್ ಗ್ರೂಪ್ ಸೊಸೈಟಿ ಆಫ್ ಇಂಡಿಯಾ ಇದರ ಪ್ರದಾನ ವ್ಯವಸ್ಥಾಪಕ ಜಿ.ಎಸ್
ಸಚಿದೇವ ನವದೆಹಲಿ ತಿಳಿಸಿದ್ದಾರೆ.
