ಮಂಗಳೂರು : ಮಾರಣಾಂತಿಕ ಹಲ್ಲೆ ಐವರ ಬಂಧನ
ಮಂಗಳೂರು : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಂಡಂತಿಲ ಗ್ರಾಮ ಪಡು ಎಂಬಲ್ಲಿ ಡಿಸೆಂಬರ್ 10ರಂದು 7:30 ಗಂಟೆಗೆ ಮಂಗಳೂರು ತಾಲೂಕು, ಅಡ್ಯಾರ್ ಪದವು ಗ್ರಾಮದ ನಿವಾಸಿಯಾದ ಮೊಹಮ್ಮದ್ ರಿಯಾಜ್ ಎಂಬುವವರು ತಮ್ಮ ಕಾರಿನಲ್ಲಿ ತಮ್ಮ ಮನೆಯ ಕಡೆಗೆ ತೆರಳುತ್ತಿರುವಾಗ 7 ರಿಂದ 8 ಜನ ಆರೋಪಿಗಳು ಮೋಟಾರು ಸೈಕಲ್ ಮತ್ತು ಒಂದು ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ, ಕಾರನ್ನು ತಡೆದು ನಿಲ್ಲಿಸಿ, ಕಾರಿನ ಹೆಡ್ ಲೈಟ್, ಬಂಪರ್ ಗೆ ಕ್ರಿಕೇಟ್ ಬ್ಯಾಟ್ ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದು ಜಖಂಗೊಳಿಸಿ ನಂತರ ಕಾರಿನಲ್ಲಿದ್ದ ಮೊಹಮ್ಮದ್ ರಿಯಾಜ್ ನನ್ನು ಕಾರಿನಿಂದ ಎಳೆದು ಹೊರಕ್ಕೆ ತಂದು ಕೈಯಲ್ಲಿದ್ದ ಬ್ಯಾಟ್, ರಾಡ್ ಮತ್ತು ಬೀಯರ್ ಬಾಟಲಿಗಳಿಂದ ತಲೆಗೆ, ಬಲ ಕಣ್ಣಿಗೆ, ಬಲ ಹುಬ್ಬುಗಳಿಗೆ ಬಲವಾಗಿ ಹೊಡೆದು ಗಂಭೀರ ಸ್ವರೂಪದ ರಕ್ತಗಾಯವನ್ನುಂಟು ಮಾಡಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.
ಕೃತ್ಯವೆಸಗಿದ ಆರೋಪಿಗಳಾದ ಗಣೇಶ್ (23), ಚೇತನ್ ಕುಮಾರ್ (21), ಕೀರ್ತಿ ರಾಜ್ (23), ಸುವೀತ್ (19), ಪರೀಕ್ಷಿತ್ (20)ರನ್ನು ದಸ್ತಗಿರಿ ಮಾಡಲಾಗಿದೆ.
