ಹಿಂದು ಜಾಗರಣ ವೇದಿಕೆ ಮುದರಂಗಡಿ ಘಟಕದ ವತಿಯಿಂದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ
ಕಾಪು : ಹಿಂದು ಜಾಗರಣ ವೇದಿಕೆ ಮುದರಂಗಡಿ ಘಟಕದ ವತಿಯಿಂದ, ಮುದರಂಗಡಿ, ವಿದ್ಯಾನಗರ ಶ್ರೀ ದುರ್ಗ ಮಂದಿರದಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ದೇಶದ ಮಹಾನ್ ದಂಡನಾಯಕ ಸಿಡಿಎಸ್ ಬಿಪಿನ್ ರಾವತ್ ಹಾಗು ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಥಿತಿಗಳಿಂದ ದೀಪ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಾಪಕರಾದ ಹರಿ ಹೆಚ್ ರವರು ಸಿಡಿಎಸ್ ರಾವತ್ ಹಾಗು ಯೋಧರ ವಿಷಯವಾಗಿ ಪ್ರಾಸ್ತಾವಿಕ ನುಡಿನಮನಗಳನ್ನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆ ಕಾಪು ತಾಲೂಕು ಅಧ್ಯಕ್ಷರಾದ ಶಶಿಧರ್ ಹೆಗ್ಡೆ, ಶಿರ್ವ ವಲಯ ಉಪಾಧ್ಯಕ್ಷರಾದ ಜೀತು ಶೆಟ್ಟಿ ಪಿಲಾರ್ , ಶಿರ್ವ ವಲಯ ಕಾರ್ಯದರ್ಶಿ ನಿಕೇಶ್ ಪೂಜಾರಿ , ಜಾಗರಣ ವೇದಿಕೆ ಮುದರಂಗಡಿ ಘಟಕದ ಅಧ್ಯಕ್ಷರಾದ ಪ್ರತೀಕ್ ಹೆಚ್ ಪಿಲಾರ್ , ಜಾಗರಣ ಮುದರಂಗಡಿ ಉಪಾಧ್ಯಕ್ಷರಾದ ಸುರೇಶ್ ಅಮೀನ್ ಕಾಪಿಕಾಡ್, ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರತ್ ಶೆಟ್ಟಿ ಸಾಂತೂರ್ , ಶಕ್ತಿ ಕೇಂದ್ರ ಬಿಜೆಪಿ ಮುದರಂಗಡಿ ಅಧ್ಯಕ್ಷರಾದ ಶಿವರಾಮ್ ಭಂಡಾರಿ , ಪಂಚಾಯತ್ ಸದಸ್ಯರುಗಳಾದ ಮೋಹಿನಿ ಹೆಗ್ಡೆ, ಪ್ರಮೀಳ, ಶ್ರೀ ದುರ್ಗ ಮಂದಿರ ಅರ್ಚಕರಾದ ಶ್ರೀಧರ್ ಆಚಾರ್ಯ, ಹರಿಣಾಕ್ಷ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಹಾಗು ಜಾಗರಣ ವೇದಿಕೆ ಮುದರಂಗಡಿಯ ಕಾರ್ಯಕರ್ತರು ಉಪಸ್ಥಿರಿದ್ದರು.
