ಮಂಗಳೂರು ನಗರ ಪೊಲೀಸ್ ವತಿಯಿಂದ ಪರಿವರ್ತನಾ ಸಭೆ
ಮಂಗಳೂರು : ಇಲ್ಲಿನ ನಗರ ಪೊಲೀಸ್ ವತಿಯಿಂದ
ಪರಿವರ್ತನಾ ಸಭೆಯು ಡಿಸೆಂಬರ್ 16, ಬೆಳಿಗ್ಗೆ 11.30ಕ್ಕೆ ಶ್ರೀ ಟಿ.ವಿ. ರಮಣ ಪೈ ಕನ್‌ವೆನ್ಶನ್ ಸೆಂಟರ್ ಇಲ್ಲಿ ಜರಗಲಿದೆ.
ಉದ್ಯಮಿಗಳು ಹಾಗೂ ಎ.ಜೆ. ಸಮೂಹ ಸಂಸ್ಥೆಗಳು ಮಂಗಳೂರು ಇದರ ಅಧ್ಯಕ್ಷರಾದ, ಡಾ. ಎ.ಜೆ. ಶೆಟ್ಟಿ,
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ, ಮಂಗಳೂರು ಇದರ ಆಡಳಿತಾಧಿಕಾರಿ ವಂದನೀಯ ರುಡೋಲ್ಫ್ ರವಿ ಡೇಸ, ಛೇಯರ್‌ಮ್ಯಾನ್ ಮತ್ತು ಮೆಡಿಕಲ್ ಡೈರೆಕ್ಟರ್, ಯುನಿಟಿ ಆಸ್ಪತ್ರೆ, ಮಂಗಳೂರು ಇದರ ಡಾ. ಸಿ.ಪಿ. ಹಬೀಬ್ ರೆಹಮಾನ್, ಪೊಲೀಸ್ ಕಮೀಷನರ್, ಮಂಗಳೂರು ನಗರ ಎನ್. ಶಶಿಕುಮಾರ್, ಪೊಲೀಸ್ ಉಪಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರ ಹರಿರಾಮ್ ಶಂಕರ್, ಪೊಲೀಸ್ ಉಪಆಯುಕ್ತರು, ಅಪರಾಧ ಮತ್ತು ಸಂಚಾರ, ಮಂಗಳೂರು ನಗರ ಬಿ.ಪಿ. ದಿನೇಶ್ ಕುಮಾರ್,
ಪೊಲೀಸ್ ಉಪಆಯುಕ್ತರು, ಸಿಎಆರ್, ಮಂಗಳೂರು ನಗರ ಚೆನ್ನವೀರಪ್ಪ ಹಡಪದ್ ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
