ನಾನಿಲ್ತಾರ್ ಕುಲಾಲ ಸಂಘದ ವಾರ್ಷಿಕ ಸಭೆಯಲ್ಲಿ ತೆರೆಮರೆಯ ನಿಸ್ವಾರ್ಥ ಸಮಾಜ ಸೇವಕ ಸಂತೋಷ್ ಕುಲಾಲ್ ಪದವು ಇವರಿಗೆ ಸನ್ಮಾನ
ಕಾರ್ಕಳ : ಸಾಮಾಜಿಕ ಜಾಲತಾಣ ಎಂಬುದು ಬರಿ ಮನೋರಂಜನೆ ಸೀಮಿತವಲ್ಲ ಅಲ್ಲಿ ಕೆಲವೊಂದು ಕುಟುಂಬಕ್ಕೆ ಸಹಾಯ ಮಾಡಬಹುದು ಎನ್ನುವ ಸಂತೋಷ್ ಕುಲಾಲ್ ಪದವು ಇವರ ವಾಟ್ಸಾಪ್ ಗ್ರೂಪ್ ಸದ್ದಿಲ್ಲದೇ ಹಲವು ಕುಟುಂಬಕ್ಕೆ ಆಸರೆ ಆಗಿದೆ. ತೆರೆಮರೆಯ ಇವರ ಕಾರ್ಯವನ್ನು ಗುರುತಿಸಿ ನಾನಿಲ್ತಾರ್ ಕುಲಾಲ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ್ ಕುಲಾಲ್ ಸಮುದಾಯದ ದೀನರ ಸೇವೆ ಅದು ನನ್ನೊಬ್ಬನ ಸಾಧನೆಯಲ್ಲ ನಾನು ನೆಪ ಮಾತ್ರ. ಹೂವಿನ ಹಾರದೊಂದಿಗೆ ದಾರಕ್ಕೂ ಪುಷ್ಪಗಳ ಜತೆ ದೇವರ ಮುಡಿಯೇರುವ ಭಾಗ್ಯದಂತೆ ನಮ್ಮ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ನಾನಿಂದು ಗುರುತಿಸಲ್ಪಟ್ಟಿರುವುದು ಇದು ನನ್ನ ಸೌಭಾಗ್ಯ. ಇಲ್ಲಿ ನಾನು ದಾರ ಮಾತ್ರ. ಇಂದು ನನಗೆ ಸಂದ ಗೌರವ ಅದು ಆ ಪುಷ್ಪಗಳಿಗೆ ಅರ್ಪಿಸಿದ್ದೇನೆ. ಆ ಪುಷ್ಪಗಳಿಲ್ಲದೆ ನಾನು ಎಲ್ಲೋ ಒಂದು ಕಡೆ ದಾರವಾಗಿ ಬಿದ್ದಿರಬೇಕಾಗಿತ್ತು.
ಇಂದು ನಾನಿಲ್ತಾರ್ ಕುಲಾಲ ಸಂಘ ನನ್ನನ್ನು ಗುರುತಿಸಿದೆ ಎಂದರೆ ಅದು ನನ್ನ ಸೇವೆಯನ್ನು ಕರ್ತವ್ಯ ಎಂಬಂತೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭ ನಾನಿಲ್ತಾರ್ ಸಂಘದ ಗೌರವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
