ಕಾಪು : ಜನತಾದಳದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ, ಪುರಸಭಾ ಚುನಾವಣಾ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕಾಪು : ಉಡುಪಿ ಜಿಲ್ಲೆಯ, ಕಾಪು ವಿಧಾನಸಭಾ ಕ್ಷೇತ್ರದ ಕಾಪು ಪುರಸಭೆ ವ್ಯಾಪ್ತಿಯ ಜನತಾದಳ(ಜಾತ್ಯತೀತ) ಪಕ್ಷದ ಚುನಾವಣಾ ಪ್ರಚಾರ ಕಚೇರಿಯನ್ನು ಕಾಪು ಮಹಾಬಲ ಮಾಲ್ ನ 2ನೇ ಮಹಡಿಯಲ್ಲಿ ಡಿಸೆಂಬರ್ 15ರಂದು, ಪಕ್ಷದ ನಾಯಕರಾದ ಪರಮೇಶ್ವರಪ್ಪ, ಮತ್ತು ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ತದ ನಂತರ ಪುರಸಭಾ ಚುನಾವಣಾ ಅಭ್ಯರ್ಥಿಗಳು,ಪಕ್ಷದ ಎಲ್ಲಾ ನಾಯಕರೊಂದಿಗೆ ಕಾಪು ಪುರಸಭಾ ಚುನಾವಣಾ ಅಧಿಕಾರಿಯವರಿಗೆ ನಾಮಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಮುಖಂಡರು, ಜಿಲ್ಲಾಪದಾಧಿಕಾರಿಗಳು, ಕಾಪು ವಿಧಾನಸಭಾ ಕ್ಷೇತ್ರಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
