ಕಾಪು ಪುರಸಭಾ ಚುನಾವಣೆ - ಟಿಕೆಟ್ ಹಂಚಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯು ನಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಕಡೆ ಪಕ್ಷವು ನಡೆದುಕೊಂಡಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೆಲವು ಕಡೆ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದ ಬಗೆಯೂ ಚರ್ಚಿತವಾಗುತ್ತಿದೆ. ಹಿಂದು ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಶಿವಾನಂದ ಪೂಜಾರಿ ಯಾನೆ ಮುನ್ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಭಾರತ ನಗರ ವಾರ್ಡ್ ನಲ್ಲಿ ಜಿ ಎಸ್ ಬಿ ಸಮಾಜದ ಹರೀಶ್ ಕಮಲಾಕ್ಷ ನಾಯಕ್ ರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದೆ. ಕೆಲವೊಂದು ವಾಡ್೯ಗಳಲ್ಲಿ ಬಿಜೆಪಿ ಪಕ್ಷವನ್ನೇ ಬೆಂಬಲಿಸುವ ಜಾತಿಗಳಾದ ಜಿ ಎಸ್ ಬಿ ಮತ್ತು ಬ್ರಾಹ್ಮಣ ಜಾತಿಗಳಿಗೆ ಮಣೆ ಹಾಕಿಲ್ಲ, ಜಾತಿವಾರು ಲೆಕ್ಕದಲ್ಲಿ ಬಿಜೆಪಿಯು ಎಡವಿದೆ ಎನ್ನಲಾಗುತ್ತಿದೆ.
ನಿವೃತ್ತ ಸಿಆರ್ಪಿಎಫ್ ಯೋಧ ರಾಜೇಶ್ ಮೆಂಡನ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಏನಿದ್ದರೂ ಮತದಾರರ ಒಲವು ಯಾವ ಪಕ್ಷದ ಮೇಲಿದೆ ಎಂಬುದು ಫಲಿತಾಂಶ ಬಂದ ಮೇಲಷ್ಟೆ ನಿರ್ಣಯಿಸಬೇಕಾಗಿದೆ.
