ಎಡ್ಮೇರು : ನಿಸರ್ಗ ಯುವಕ ಮಂಡಲದ 20ನೇ ವಾರ್ಷಿಕೋತ್ಸವ
Thumbnail
ಕಾಪು : ಇಲ್ಲಿಯ ಮೂಡುಬೆಳ್ಳೆಯ ಎಡ್ಮೇರು ನಿಸರ್ಗ ಯುವಕ ಮಂಡಲದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿಸೆಂಬರ್ 17, ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ರಗಂಟೆಯವರೆಗೆ ಉಡುಪಿ, ದ.ಕ. ಜಿಲ್ಲೆಯ ಆಯ್ದ ತಂಡಗಳಿಂದ ಕಟ್ಟಿಂಗೇರಿ ಸುಭಾಶ್ಚಂದ್ರ ಹೆಗ್ಡೆ ಇವರ ಸಾರಥ್ಯದಲ್ಲಿ ಎಡ್ಮೇರು ನಾಲ್ಕು ಬೀದಿ ಜಂಕ್ಷನ್ ನಲ್ಲಿ 'ನಿಸರ್ಗ ತೆಲಿಪಾಲೆ' ಎಂಬ ಹಾಸ್ಯ ಕಾರ್ಯಕ್ರಮ ಸ್ಪರ್ಧೆ ಜರಗಲಿದೆ. ಡಿಸೆಂಬರ್ 18 ಶನಿವಾರ ರಾತ್ರಿ 8:30ಕ್ಕೆ ಯುವಕ ಮಂಡಲದ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ 500ನೇ ಪ್ರದರ್ಶನದ ತುಳು ಹಾಸ್ಯಮಯ ನಾಟಕ ಪಿರ ಬನ್ನಗ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
17 Dec 2021, 04:27 PM
Category: Kaup
Tags: