ಪಡುಬಿದ್ರಿ : ಪಡುಹಿತ್ಲು ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ
ಪಡುಬಿದ್ರಿ : ಇಲ್ಲಿನ ಪಡುಹಿತ್ಲು ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ಶ್ರೀ ಮೈಸಂದಾಯ, ಶ್ರೀ ಜಾರಂದಾಯ ಬಂಟ, ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ
ಡಿಸೆಂಬರ್ 21ನೇ ಮಂಗಳವಾರ ಮತ್ತು 22ನೇ
ಬುಧವಾರ ನಡೆಯಲಿದೆ.
ಡಿಸೆಂಬರ್ 21, ಮಂಗಳವಾರ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಘಂಟೆ 6 ಕ್ಕೆ :ದೈವದ ಭಂಡಾರ ಇಳಿಯುವುದು, ರಾತ್ರಿ 8 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30 ರಿಂದ ಶ್ರೀ ಮೈಸಂದಾಯ ದೈವದ ನೇಮೋತ್ಸವ, ರಾತ್ರಿ 9 ರಿಂದ ಜಾರಂದಾಯ ದೈವದ ನೇಮೋತ್ಸವ ಜರಗಲಿದೆ.
ಡಿಸೆಂಬರ್ 22, ಬುಧವಾರ ಬೆಳಗ್ಗೆ 9 ಕ್ಕೆ ಶ್ರೀ ಧೂಮಾವತಿ ಪರಿವಾರ ದೈವಗಳ ಮತ್ತು ಮಾಯಾಂದಾಲ್ ದೈವದ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
