ಇಂದು ತೆರೆಗೆ : ಆರ್‌ಎಸ್‌ಬಿ ಕೊಂಕಣಿ ಭಾಷೆಯಲ್ಲಿ ಪ್ರಪ್ರಥಮವಾಗಿ ನಿರ್ಮಾಣಗೊಂಡ ಚಲನಚಿತ್ರ ಅಮ್ಚೆ ಸಂಸಾರ್ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ
ಮಂಗಳೂರು: ಆರ್‌ಎಸ್‌ಬಿ ಕೊಂಕಣಿ ಭಾಷೆಯಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣಗೊಂಡ ಚಲನಚಿತ್ರ ಅಮ್ಚೆ ಸಂಸಾರ್ ಇಂದು ಅಪರಾಹ್ನ 3 ಗಂಟೆಗೆ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ತೆರೆಕಾಣಲಿದೆ.
ಪ್ರದರ್ಶನ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ನಿವೃತ್ತ ಜನರಲ್
ಮೆನೇಜರ್ ಎನ್.ಉಪೇಂದ್ರ ಉದ್ಘಾಟಿಸಲಿದ್ದು,
ಮಂಗಳೂರು ಆರ್.ಎಸ್.ಬಿ. ಸಂಘದ ಅಧ್ಯಕ್ಷ ಆರ್.ಎಂ.ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ನಿರ್ದೇಶನವನ್ನು ಸಂದೀಪ್ ಕಾಮತ್ ಅಜೆಕಾರು ಮಾಡಿದ್ದು, ಭುವನೇಶ್ ಪ್ರಭು ಹಿರೇಬೆಟ್ಟು ಸಿನೇಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಪುಂಡಲೀಕ ಮರಾಠೆ ಮಾಹಿತಿ ನೀಡಿದರು.
ಈ ಸಂದರ್ಭ ಚಿತ್ರ ತಂಡದ ಸಂದೀಪ್ ಕಾಮತ್ ಅಜೆಕಾರು, ಭುವನೇಶ್ ಪ್ರಭು ಹಿರೇಬೆಟ್ಟು, ನಟ ರೋಹನ್ ನಾಯಕ್ ಹಾಗೂ ಮಂಗಳೂರು ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಆರ್.ಎಂ.ಪ್ರಭು ಉಪಸ್ಥಿತರಿದ್ದರು.
