ಕಾಪು : ಕಾರು - ಬಸ್ಸು ಡಿಕ್ಕಿ, ಮಹಿಳೆ ಪ್ರಾಣಪಾಯದಿಂದ ಪಾರು
ಕಾಪು : ಇಲ್ಲಿನ ಹೊಸ ಮಾರಿಗುಡಿ ಮುಂಭಾಗದ ಎಕ್ಸ್ಪ್ರೆಸ್ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಮಹಿಳೆಯೋರ್ವರು ಎಟಿಯೋಸ್ ಕಾರಿನ ಹಿಂಭಾಗದಿಂದ ಬಲ ಭಾಗದ ಬಾಗಿಲಿನಿಂದ ಇಳಿಯಲು ಯತ್ನಿಸಿದಾಗ ನವದುರ್ಗಾ ಎಕ್ಸ್ಪ್ರೆಸ್ ಬಸ್ ಕಾರಿನ ಬಾಗಿಲಿಗೆ ಹೊಡೆದು ಕಾರಿನ ಬಾಗಿಲು ನಜ್ಜುಗುಜ್ಜಾಗಿರುತ್ತದೆ.
ಕಾರಿನಲ್ಲಿದ್ದ ಮಹಿಳೆಯ ಕೈಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿರುತ್ತಾರೆ.
