ಕಾಪು : ಪುರಸಭಾ ಚುನಾವಣೆಗೆ ಜನತಾದಳದಿಂದ 7 ಅಭ್ಯರ್ಥಿಗಳು ಕಣಕ್ಕೆ ; ಜನಸಾಮಾನ್ಯರ ಎಲ್ಲಾ ಸಂಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ ಇದು ನಮ್ಮ ಶಪಥ
Thumbnail
ಕಾಪು : ಇಲ್ಲಿನ ಪುರಸಭಾ ಚುನಾವಣೆಗೆ ಜನತಾದಳ(ಜಾತ್ಯತೀತ) ಪಕ್ಷದ ವತಿಯಿಂದ ಮನೆ ಮನೆ ಪ್ರಚಾರಗಳು ಭರದಿಂದ ಸಾಗುತ್ತಿದ್ದು, 2ನೇ ಅವಧಿಗೆ ಕಾಪು ಪುರಸಭೆಯ ಚುನಾವಣೆಗೆ ಜನತಾದಳ ಪಕ್ಷದಿಂದ 7ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಕಳೆದ ಬಾರಿ ಮೊದಲು ಕಾಂಗ್ರೆಸ್ ನಂತರ ಬಿಜೆಪಿ ಅಧಿಕಾರವನ್ನು ನಡೆಸಿದೆ. ಪುರಸಭೆ, ಪ್ರಾಧಿಕಾರ, ಇನ್ನಿತರ ಕಾನೂನಾತ್ಮಕ ತೊಡರುಗಳಿಂದ 25% ಜನರಿಗೆ ಲಾಭ 75% ನಷ್ಟವೇ ಆಗಿದೆ. ತೆರಿಗೆ ಏರಿಸುವುದಿಲ್ಲವೆಂದು ಹೇಳಿ ಅತೀ ಹೆಚ್ಚು ತೆರಿಗೆಯನ್ನು ಏರಿಸಿರುತ್ತಾರೆ. ತುರಾತುರಿಯಲ್ಲಿ ಪ್ರಾಧಿಕಾರ ರಚನೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯ ಪುರಸಭೆಯ ಸದಸ್ಯರು ಜನರನ್ನು ಕತ್ತಲೆಯಲ್ಲಿಟ್ಟು, ಹಸಿರು ವರ್ತುಲ ಮಾಡಲು ಹೊರಟಿರುತ್ತಾರೆ. ಯಾವುದೇ ರೀತಿಯಲ್ಲಿ ಜನರಿಂದ ಚರ್ಚೆ/ಅಭಿಮತವನ್ನು ಪಡೆದುಕೊಳ್ಳಲಿಲ್ಲ. ಪುರಸಭೆಯಲ್ಲಿ ಜನರ ಸರ್ವತೋಮುಖ ಅಭಿವೃದ್ಧಿಗೆ,ಮೂಲಭೂತ ಸೌಕರ್ಯಕ್ಕೆ ಖಂಡಿತಾ ಒತ್ತು ಕೊಡುತ್ತೇವೆ. ಜನಸಾಮಾನ್ಯರ ಎಲ್ಲಾ ಸಂಕಷ್ಟ ಗಳಿಗೆ ನಾವು ಸ್ಪಂದಿಸುತ್ತೇವೆ ಇದು ನಮ್ಮ ಶಪಥ. ಜನವಿರೋಧಿ ಕಾನೂನಿನ ಬಗ್ಗೆ ವ್ಯವಸ್ಥಿತ ರೀತಿಯಲ್ಲಿ ವಿರೋಧವನ್ನು ಮಾಡಿ ಜನರ ಪರವಾಗಿ ಸಮರ್ಪಕವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅದಕ್ಕಾಗಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಿರಿ ಎಂಬ ಭರವಸೆ ನಮ್ಮಲ್ಲಿದೆ ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡುತ್ತೇವೆ, ಅದಕ್ಕಾಗಿ ನಮ್ಮ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುತೇವೆ ಎಂದು ಜನತಾದಳ(ಜಾತ್ಯತೀತ) ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾಪು ಪುರಸಭಾ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ)ದಿಂದ ಸ್ಪರ್ಧಿಸುವ ಅಭ್ಯರ್ಥಿಗಳು : ಅಬ್ದುಲ್ ಜಲೀಲ್ : 7ನೇ ಭಾರತ್ ನಗರ ವಾಡ್೯ ಉದಯ ಆರ್. ಶೆಟ್ಟಿ : 8ನೇ ಬೀಡು ಬದಿ ವಾಡ್೯ ದೇವರಾಜ : 11ನೇ ಲೈಟ್ ಹೌಸ್ ವಾಡ್೯ ಸನಾ ಬಾನು : 15ನೇ ಮಂಗಳ ಪೇಟೆ ವಾಡ್೯ ರುಬೀನಾ ಬೇಗಂ : 17ನೇ ಬಡಗರ ಗುತ್ತು ವಾಡ್೯ ಉಮೇಶ್ ಕರ್ಕೇರಾ : 18ನೇ ಕೊಂಬಗುಡ್ಡೆ ವಾಡ್೯ ಶೇಖ್ ಸನವರ್ ಕಲೀಮ್ : 23ನೇ ಅಹಮದಿ ಮೊಲ್ಲಾ ವಾಡ್೯
22 Dec 2021, 09:38 AM
Category: Kaup
Tags: