ಉಡುಪಿ ಪೀಟ್ಸ್ ತಂಡದಿಂದ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಪ್ರದರ್ಶಿಸಲ್ಪಡಲಿದೆ ತುಳುನಾಡಿನ ಕಂಗಿಲ್ ನೃತ್ಯ
ಉಡುಪಿ : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾಗಿ ದೆಹಲಿಯಲ್ಲಿ ವಂದೇ ಭಾರತಂ ನೃತ್ಯ ಉತ್ಸವ- 2021 ಫೈನಲ್‌ನಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪ್ರತಿನಿಧಿಸಿದ ಉಡುಪಿ ಜಿಲ್ಲೆಯ ಕಾಲೇಜ್ ವಿದ್ಯಾರ್ಥಿಗಳಿಂದ ಕೂಡಿದ 'ಉಡುಪಿ ಪೀಟ್ಸ್' ತಂಡವು ತುಳುನಾಡಿನ ದೈವರಾಧನೆಗೆ ಹೆಸರು ಪಡೆದ ಕಂಗಿಲ್ ನೃತ್ಯ ರೂಪಕ ಪ್ರಸ್ತುತಪಡಿ ಜಯಗಳಿಸಿದ್ದಾರೆ.
ಈ ತಂಡವು ಮಂಂದೆ ದೇಶದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ದೊರಕಿದೆ.
ತುಳುನಾಡಿನ ಕಂಗಿಲ್ ನೃತ್ಯದ ಮೂಲಕ ಉಡುಪಿ ಪೀಟ್ಸ್ ತಂಡವು ದೆಹಲಿಯಲ್ಲಿ ತುಳುನಾಡಿನ ಕಂಪನ್ನು ಪಸರಿಸಲಿದೆ.
