ಎನ್ ಸಿಸಿ ವಿಶೇಷ ತರಬೇತಿ ಶಿಬಿರ
ಶಿರ್ವ: ಇಲ್ಲಿನ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ವಲಯ ಸಂತ ಮೇರಿ ಮಹಾವಿದ್ಯಾಲಯ ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 70 ಕೆಡೆಟ್ ಗಳಿಗೆ ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ ವಿಶೇಷ ತರಬೇತಿ ಶಿಬಿರವನ್ನು ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಯಿತು.
ಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ. ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಅವರಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಈ ಶಿಬಿರದಲ್ಲಿ ಸಮುದಾಯ ಸೇವಾಗುಣ ಮೂಡಿಸುವ ಜೊತೆಗೆ ಕವಾಯತು, ಶಸ್ತ್ರ ತರಬೇತಿ, ಭೂಪಟ ಅಧ್ಯಯನ, ಫೈರಿಂಗ್ ಅಣಕುಯುದ್ಧ ಪ್ರಾತ್ಯಕ್ಷಿಕೆಯ ನಿಟ್ಟಿನಲ್ಲಿ ತರಬೇತಿ ನೀಡಿದರು.
ಹವಲ್ದಾರ್ ನರೇಶ ಸಿಂಗ್ ತೋಮರ್, ವಿನೋದ್ ರಾಯ್, ಮಹೇಂದ್ರ ಲಿಂಬು ತರಬೇತುದಾರ ರಾಗಿದ್ದಾರೆ. ಮೇಜರ್ ಪ್ರಕಾಶ್ ರಾವ್, ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್, ಲೆಫ್ಟಿನೆಂಟ್ ನವ್ಯ ಭಾಗವಹಿಸಿದ್ದರು.
