ಜನವರಿ 2ರಂದು ಪಾಂಜಗುಡ್ಡೆಯಲ್ಲಿ ಉಚಿತ ನೇತ್ರ ತಪಾಸಣೆ
Thumbnail
ಶಿರ್ವ : ಧರ್ಮ ಫೌಂಡೇಶನ್ (ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಶಿರ್ವ ಇವರ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಇವರ ಸಹಭಾಗಿತ್ವದಲ್ಲಿ ಜನವರಿ 02, ರವಿವಾರದಂದು ಬೆಳಿಗ್ಗೆ ಘಂಟೆ 9ರಿಂದ ಮಧ್ಯಾಹ್ನ 12.30ರ ತನಕ ಧರ್ಮ ಫೌಂಡೇಶನ್(ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಕಡಂಬು, ಶಿರ್ವ ಇಲ್ಲಿ ಉಚಿತ ನೇತ್ರ ತಪಾಸಣೆ ನಡೆಯಲಿದೆ. ಈ ಸಂದರ್ಭ ಅಗತ್ಯ ಇರುವವರಿಗೆ ಉಚಿತ ಕನ್ನಡಕ ಹಾಗೂ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗಿರೀಶ್ ಜಿ. (9946815444)
26 Dec 2021, 04:39 PM
Category: Kaup
Tags: