ಓಂತಿಬೆಟ್ಟು : ವೃದ್ಧೆಯೋರ್ವರ ಮನೆಗೆ ಬೇಕಾದ ಸವಲತ್ತುಗಳನ್ನು ನೀಡಿ ಮಾನವೀಯತೆ ಮೆರೆದ ತಂಡ
Thumbnail
ಉಡುಪಿ : ಹಿರಿಯಡ್ಕ ಸಮೀಪ ಓಂತಿಬೆಟ್ಟು ಎಂಬ ಊರಿನಲ್ಲಿ ವೃದ್ಧೆಯೋರ್ವರ ಮನೆಯಿದ್ದು ಸರಿಯಾದ ವ್ಯವಸ್ಥೆಯನ್ನು ಹೊಂದಿರದ ಈ ಮನೆಗೆ ಬೇಕಾದ ಸವಲತ್ತುಗಳನ್ನು ಸಮಾಜ ಸೇವಕರಾದ ನೀತಾ ಪ್ರಭು ಮತ್ತು ತಂಡದಿಂದ ನೀಡಲ್ಪಟ್ಟಿತು. ಮನೆಯ ಮೇಲ್ಛಾವಣಿ, ಸ್ವಿಚ್, ಬಲ್ಬ್, ಅಡುಗೆ ಕೋಣೆಗೆ ಬೇಕಾದ ಸವಲತ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ತಂಡಕ್ಕೆ ಊಟೋಪಚಾರದ ವ್ಯವಸ್ಥೆಯನ್ನು ಸಂದೀಪ್ ನೀಡಿ ಸಹಕರಿಸಿದ್ದರು. ಇಂತಹ ಜೀವನ ಸಾಗಿಸುತ್ತಿದ್ದ ವೃದ್ಧೆಗೆ ಒಂದು ಸರಿಯಾದ ಸೂರನು ನಿರ್ಮಿಸಿ ಕೊಡುವುದು ನಮ್ಮ ತಂಡದ ಗುರಿಯಾಗಿತ್ತು ಅದು ಇಂದು ನೆರವೇರಿತು. ನಾವು ಕೊಡುವಷ್ಟು ಬೆಳೆದಿಲ್ಲ ಆದರೆ ಇರುವುದರಲ್ಲಿ ಹಂಚಿ ತಿನ್ನುವಷ್ಟು ಮನಸ್ಸು ಆ ದೇವರು ಕೊಟ್ಟಿದ್ದಾನೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ತಂಡದ ಪ್ರಮುಖರು ತಿಳಿಸಿದರು.
Additional image
27 Dec 2021, 12:18 PM
Category: Kaup
Tags: