ಹಳೆ ತುಳು ಮುದ್ರಿತ ನಾಟಕ ಪುಸ್ತಕಗಳ ಸಂಗ್ರಾಹಕರು ಶ್ರೀ ಪ್ರಭಾಕರ್ ಕಲ್ಯಾಣಿ
Thumbnail
ಕಾಪು : ನಮ್ಮ ಕಾಪು ನ್ಯೂಸ್ (07/07/2020))ಉಡುಪಿ ಸಮೀಪದ ಪೆರ್ಡೂರಿನಲ್ಲಿ ಜನಿಸಿದ ಶ್ರೀ ಪ್ರಭಾಕರ ಕಲ್ಯಾಣಿ ಇವರು ರಂಗಭೂಮಿ ಕಲಾವಿದರಾಗಿದ್ದು,ತುಳು ಮುದ್ರಿತ ತುಳು ನಾಟಕ ಪುಸ್ತಕಗಳನ್ನು ಸಂಗ್ರಹಮಾಡುವ ಹವ್ಯಾಸವನ್ನು ಕಳೆದ ಹತ್ತು ವರ್ಷದಿಂದ ಮಾಡುತ್ತಿದ್ದಾರೆ...ಹಳೆಯ ಕಾಲದ ನಾಟಕದ ಪುಸ್ತಕ ಹಾಗೂ ಇತ್ತಿಚೀನ ತುಳು ನಾಟಕದ ಪುಸ್ತಕಗಳು ಇವರ ಪುಸ್ತಕ ಭಂಡಾರದಲ್ಲಿದೆ.. ಶ್ರೀ ಪ್ರಭಾಕರ್ ಕಲ್ಯಾಣಿ ಇವರ ತಂದೆ ದಿ/ ಪಿ ರಾಮಕೃಷ್ಣ ಕಲ್ಯಾಣಿ ರಂಗಭೂಮಿಯಲ್ಲಿ ಹಾಸ್ಯ ಕಲಾವಿದರಾಗಿ ಮಿಂಚಿದ್ದು ತಂದೆಯ ಬಹುಕನಸಿಗೆ ಅವರ ಅದರ್ಶದಂತೆ ರಂಗಭೂಮಿಯಲ್ಲಿ ಅತೀವ ಸಾಧನೆಗೈದವರು.. ಶ್ರೀ ಪ್ರಭಾಕರ್ ಕಲ್ಯಾಣಿ ಇವರ ಸಾಧನೆಗೆ ಒಲಿದ ಸನ್ಮಾನಗಳು.. ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರ ತುಳು ನಾಟಕದ ಪುಸ್ತಕದ ಸಂಶೋಧನೆಯಲ್ಲಿ ತುಳು ಸಾಂಕಿತ್ಯ ಚರಿತ್ರೆ ಎಂಬ ಪುಸ್ತಕದಲ್ಲಿ ಇವರ ಹೆಸರು ನಮೂದಿಸಿರುತ್ತಾರೆ.. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಶ್ತಿ,ವಿಜಯ ಬ್ಯಾಂಕ್ ಬೆಂಗಳೂರು ನೀಡುವ ವಿಜಯಶ್ರಿ ಪ್ರಶಸ್ತಿ ಪಡೆದಿರುತ್ತಾರೆ.. ವೃತ್ತಿಯಲ್ಲಿ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ಇತೀಚೆಗೆ ನಿವೃತ್ತಿ ಹೊಂದಿರುವ ಇವರು ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನಿತಗೊಂಡ ಇವರ ಕುಟುಂಬದ ಸದಸ್ಯರೂ ಕೂಡ ಮುಖಕ್ಕೆ ಬಣ್ಣ ಹಚ್ಚಿ ರಂಗಭೂಮಿಯಲ್ಲಿ ನಿರತವಾಗಿರುವುದು ನಿಜಕ್ಕೂ ಹೆಮ್ಮೆ.. ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಬೆಳಗು ಎಂಬ ಕಾರ್ಯಕ್ರಮದಲ್ಲಿ ಸಂದರ್ಶನ ಹೀಗೆ ಶ್ರೀ ಪ್ರಭಾಕರ್ ಕಲ್ಯಾಣಿ ಇವರ ಬಗ್ಗೆ ಬರೆದಷ್ಷು ಮುಗಿಯದು.. ಶ್ರೀ ಪ್ರಭಾಕರ್ ಕಲ್ಯಾಣಿಯವರ ಅಭಿರುಚಿಯ ಹಳೆಯ ತುಳು ನಾಟಕದ ಪುಸ್ತಕವಿದ್ದಲ್ಲಿ ನೀಡಿ.. ಅವರ ಮೊಬೈಲ್ ಸಂಖ್ಯೆ ಈ ರೀತಿ ಇದೆ.. 9945491572 ಧನ್ಯವಾದಗಳು ಬರಹ: ಯು.ಕೆ ಕಳತ್ತೂರು
07 Jul 2020, 08:59 PM
Category: Kaup
Tags: