ನಂಬಿ ಬಂದ ಭಕ್ತರ ಇಷ್ಟಾರ್ಥ ನೆರೆವೇರಿಸುವ ಕಾಪು ಸಾವಿರ ಸೀಮೆಯ ಒಡತಿ ಮಾರಿಯಮ್ಮ
Thumbnail
ಪುರಾತನ ಕಾಲದಿಂದಲೂ “ಹೂವಿನ ಹಿತ್ತಿಲು” ಎಂದೇ ಖ್ಯಾತಿಯನ್ನು ಪಡೆದಿರುವ ಕಾಪು ಸಾವಿರ ಸೀಮೆಯ ಒಡತಿ ಗದ್ದುಗೆಯನ್ನೇರಿ ಶರಣು ಬಂದ ಭಕ್ತರನ್ನು ತಥಾಸ್ತು ಎಂದು ಸದಾ ಹರಸುತ್ತಿರುವ ಶ್ರೀ ಮಾರಿಯಮ್ಮ ದೇವಿ. ಸೈಂದವ – ವೈದಿಕ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು ಜಾನಪದ ಮನೋಧರ್ಮ ಸಾನ್ನಿಧ್ಯವಿದೆ ಎಂದು ಪೂಜೆ ನಡೆಯುವುದಲ್ಲ, ಪೂಜೆ ನಡೆದಾಗ ಸಾನ್ನಿಧ್ಯವೊದಗುವುದೆಂಬುದು ಜಾನಪದ ನಂಬಿಕೆ. ಈ ಶ್ರದ್ಧೆಯ ಆಧಾರದಲ್ಲಿ ನಮ್ಮ ಧಾರ್ಮಿಕ ಆಚರಣೆ,ವಿಧಿ, ಕಟ್ಟಳೆಗಳು ಶತಮಾನಗಳಿಂದ ಸಾಗಿ ಬಂದು ಇಂದು ನಾವು ಕಾಣುವ ಸ್ವರೂಪದಲ್ಲಿದೆ, ಹಲವು ರೂಪಾಂತರಗಳನ್ನು ಹೊಂದಿದ್ದರೂ ಮೂಲವನ್ನು ಸುಪ್ತವಾಗಿ ತನ್ನಲ್ಲಿ ಬಚ್ಚಿಟ್ಟುಕೊಂಡಿವೆ. ವಿವಿಧ ಹಂತಗಳನ್ನು ದಾಟಿ ವಿಕಾಸ ಹೊಂದಿದ ಸ್ಥಿತಿಯಲ್ಲಿರುವ ಬಹುತೇಕ ಎಲ್ಲಾ ನಮ್ಮ ಆರಾಧನಾ ಪ್ರಕಾರಗಳು ಜಾನಪದ ಮೂಲಗಳಿಂದ ಪಡಿಮೂಡಿರುವವುಗಳೆಂಬುದು ಸಂಶೋಧಕರ, ಚಿಂತಕರ ಅಭಿಪ್ರಾಯ. ಈ ನಿಲುವಿನೊಂದಿಗೆ ಕರಾವಳಿ ಕರ್ನಾಟಕ, ಉಡುಪಿ ಜಿಲ್ಲೆಯ, ಕಾಪುವಿನ ಮಾರಿಯಮ್ಮ, ಮಾರಿ – ಮಾರಿಯಮ್ಮ- ಮಾರಿಯಮ್ಮದೇವರು ಎಂದು ನಿಷ್ಠಾಂತರಗೊಂಡು ಗದ್ದುಗೆ – ಗುಡಿ – ದೇವಸ್ಥಾನ ಸಂಕಲ್ಪಗಳಲ್ಲಿ ಕಾಣಿಸಿಕೊಂಡಿಡೆ. ಕೋಟೆ ಮನೆಯಲ್ಲಿ ’ಮಾರಿ’ ಮನೆ ದೇವರಾಗಿ ಪೂಜೆಗೊಳ್ಳುತ್ತಿದೆ. ಮಾರಿಗುಡಿಗಳಲ್ಲಿ ದರ್ಶನ ಆರಂಭಕ್ಕೆ ಮುನ್ನ ಹವಾಲ್ದಾರ್ ಪ್ರಾರ್ಥನೆ ನಡೆಸುತ್ತಾರೆ. ಮಂಗಳವಾರದ ಆಚರಣೆ ಮತ್ತು ಮಾರಿ ಪೂಜೆ ವಿಧಿಗಳನ್ನು ಸಂಪೂರ್ಣವಾಗಿ ನಿರ್ವಹಿಸುವುದು ಸೇರ್ವೆಗಾರ. ರಾಣ್ಯದವರೇ ಆಗಿದ್ದಾರೆ. ಇಲ್ಲಿ ಮಲ್ಲಿಗೆ ಹೂವಿನ ಪರಿಮಳ ಬರುವುದು ಹಾಗೂ ಕೋಟೆಯ ಒಳಗಿನ ನಂದಿಕೆರೆಯಲ್ಲಿ ಸ್ನಾನ ಮಾಡುವ ಸದ್ದು ಕೇಳಿ ಬರುವುದು ಜನರ ಗಮನಕ್ಕೆ ಬರುತ್ತದೆ. ಈ ಕುರಿತಂತೆ ಉಗ್ರಾಣಿಗೂ ಮಾಹಿತಿ ಲಭಿಸುತ್ತದೆ. ಹಾಗಾದರೆ ಇದೇನೆಂಬುದನ್ನು ಪರೀಕ್ಷಿಸಲು ಒಂದು ಮಂಗಳವಾರ ರಾತ್ರಿ ಉಗ್ರಾಣಿ (ಇವರು ಮುಸ್ಲಿಂ) ಕೋಟೆಗೆ ಬರುತ್ತಾರೆ. ನಿರ್ಜನ ಪ್ರದೇಶ, ಮಲ್ಲಿಗೆಯ ಪರಿಮಳ, ಸ್ನಾನ ಮಾಡುತ್ತಿರುವವರು ಹೆಂಗಸೆಂಬುದನ್ನು ಅರ್ಥೈಸಿಕೊಂಡು ಉಗ್ರಾಣಿ “ಯಾರಮ್ಮ.......ನೀವು “ ಎಂದು ಕರೆದುಕೊಳ್ಳುತ್ತಾರೆ. “ ನಾನು ಕೋಟೆಯ ಮಾರಿ “ ಎಂಬುದು ಕೆರೆಯಿಂದ ಬಂದ ಉತ್ತರ. ಕೋಟೆ ಈಗ ನಮಗಾಗಿದೆ ಎಂದು ಉಗ್ರಾಣಿ ಎಚ್ಚರಿಸಿದಾಗ “ ನನಗೆ ಬೇರೆ ನೆಲೆಯನ್ನು ತೋರಿಸಿಕೊಡು, ತೆರಳುತ್ತೇನೆ”ಎಂಬುದು ಮಾರಿಯ ಸೂಚನೆ.ಮುಸ್ಲಿಮನಿದ್ದೇನೆ ಹೇಗೆ ನೆಲೆಗೊಳಿಸಲಿ ಎಂದು ಉಗ್ರಾಣಿ ವಿನಂತಿಸಿಕೊಂಡಾಗ ನಾಲ್ಕು ಜಾತಿಯ ಜನರನ್ನು ಸೇರಿಸು ಎಂದು ಮಾರಿಯಿಂದ ಮಾರ್ಗದರ್ಶನ. ಮಾರಿಯ ಆದೇಶದಂತೆ ನಾಲ್ಕು ಜಾತಿಯ ಹತ್ತು ಸಮಸ್ತರ ಸಮ್ಮುಖದಲ್ಲಿ ಮಾರಿ ನೆಲೆಗೊಂಡು ಸೀಮಿತ ಜನ ವರ್ಗದಿಂದ ಪೂಜೆಗೊಳ್ಳುತ್ತಿದ್ದವಳು ಮುಂದೆ ಸಮುಷ್ಟಿಯ ಆರಾಧನಾ ಮೂರ್ತಿಯಾದಳು. ಗದ್ದಿಗೆ ಪೂಜೆ ಪ್ರಧಾನವಾಗಿರುವ ಮಾರಿಯಮ್ಮಳ ಸನ್ನಿಧಾನದಲ್ಲಿ ಕುಂಕುಮಾರ್ಚನೆ ಹೂವಿನ ಪೂಜೆ ಮುಂತಾದ ಸೇವೆಗಳು ಆಪಾರ ಸಂಖ್ಯೆಯಲ್ಲಿ ನಡೆಯುತ್ತದೆ. ಸಮಾಜದ ಎಲ್ಲಾ ವರ್ಗದ ಜನರು ಮಾರಿಕಾಂಬೆಯ ಸನ್ನಿಧಿಯಲ್ಲಿ ಪ್ರತಿ ಮಂಗಳವಾರ ನಡೆಯುವ ಅನ್ನಸಂತರ್ಪಣೆಯಲ್ಲಿ ಸಹಸ್ರ- ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾವುಕರಾಗಿ ಪಾಲ್ಗೊಳ್ಳುತ್ತಾರೆ. ಮಾರಿಯಮ್ಮನ ಸನ್ನಿಧಾನದಲ್ಲಿ ವರ್ಷಕ್ಕೆ 3ಬಾರಿ ನಡೆಯುವ ಕಾಲಾವಧಿ ಮಾರಿಪೂಜೆಯು ಪರಶುರಾಮ ಸೃಷ್ಟಿಯ ತುಳುನಾಡಿನ 7 ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಪಡೆದಿದೆ. ಸುಗ್ಗಿ, ಆಟಿ, ಜಾರ್ದೆ ಹೀಗೆ 3 ಬಾರಿ ನಡೆಯುವ ಕಾಲಾವಧಿ ಮಾರಿಪೂಜೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಮಲೆನಾಡು ಜಿಲ್ಲೆಗಳು ಮಾತ್ರವಲ್ಲದೆ, ದೂರದ ಮುಂಬಯಿಯಿಂದಲೂ ಜನ ಸಾಗರವೇ ಹರಿದು ಬರುತ್ತದೆ. ವರ್ಷಪ್ರತಿಯಂತೆ ಜರಗುವ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ನವ ದಿನಗಳೂ ಆಕರ್ಷಕವಾಗಿರ ಬೇಕೆಂಬ ಅಭಿಲಾಷೆಯೊಂದಿಗೆ ಪ್ರತಿ ನಿತ್ಯವೂ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಮಾತೆಯ ಸನ್ನಿಧಾನದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.ಇಲ್ಲಿ ಜರಗುವ ಚಂಡಿಕಾಯಾಗ, ಸಾಮೂಹಿಕ ಅನ್ನಸಂತರ್ಪಣೆ (ಭೂರಿ – ಭೋಜನ) ಮತ್ತು ಮಧ್ಯಾಹ್ನದ ಬಳಿಕ ನಡೆಯುವ ಶ್ರೀ ದೇವಿಯ ದರ್ಶನ ಸೇವೆಯು “ಕಾಪುದಪ್ಪೆ ಮಾರಿಯಮ್ಮನ” ಕ್ಷೇತ್ರದ ಮಹಿಮೆಯನ್ನು ಎಲ್ಲೆಡೆಗೂ ಪಸರಿಸುವಂತೆ ಮಾಡಿದೆ. ಶರದ್ ಋತು, ಅಶ್ವೀಜ ಮಾಸ, ಶುಕ್ಲ ಪಕ್ಷದ ಪ್ರಾರಂಭದಿಂದ 9 ದಿನಗಳನ್ನು ನವರಾತ್ರಿಯೆಂದೂ ಹತ್ತನೆಯ ದಿನವನ್ನು ವಿದ್ಯಾ ದಶಮಿ ಮತ್ತು ವಿಜಯ ದಶಮಿಯೆಂದೂ ಕರೆಯಲಾಗುತ್ತದೆ. ಪ್ರಕೃತಿ ಮಾತೆಯು ಮೈದುಂಬಿ ಮೆರೆಯುತ್ತಿರುವ ಸಂದರ್ಭದಲ್ಲಿ ಪ್ರಕೃತಿಯನ್ನೇ ದೇವಿಗೆ ಹೋಲಿಸಿ ಪೂಜಿಸುವ ಪುಣ್ಯ ಪರ್ವ ಕಾಲವೇ ಶರನ್ನವರಾತ್ರಿ. ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರನ್ನು 9 ದಿನಗಳ ಕಾಲ ಒಂದೊಂದು ಶಕ್ತಿ ಮಂತ್ರಗಳಿಂದ ಆವಾಹಿಸಿ ಪೂಜಿಸಲಾಗುತ್ತದೆ. 9 ದಿನಗಳಲ್ಲಿ ಆಚರಿಸಲ್ಪುಡುವ ಪೂಜಾ ವಿಧಿ ವಿಧಾನಗಳಲ್ಲಿ ಶ್ರೀ ದೇವಿಯನ್ನು ಆವಾಹನೆ, ಆಸನ, ಪಾದ್ಯ, ಆಚಮನೇಯ, ಸ್ನಾನ, ವಸ್ತ್ರ, ಧೂಪ, ದೀಪ, ನೈವೇದ್ಯ, ಪ್ರದಕ್ಷಿಣೆ, ನಮಸ್ಕಾರ, ಪ್ರಾರ್ಥನೆ ಹೀಗೆ ಷೋಢಷೋಪಾಚಾರಗಳಿಂದ ಪೂಜಿಸಿದಲ್ಲಿ ಶ್ರೀ ದೇವಿಯು ಕಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನು ಕರುಣಿಸುವಳು ಎನ್ನುವುದು ಭಕ್ತರ ನಂಬಿಕೆಯಾಗಿದೆ. ಕೃಪೆ : WhatsApp
07 Jul 2020, 09:51 PM
Category: Kaup
Tags: