ಕಟೀಲು ದೇವಸ್ಥಾನದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪ-ಆರೋಪಿತರಿಗೆ ನಿರೀಕ್ಷಣಾ ಜಾಮೀನು
Thumbnail
ಕಟೀಲು ದೇವಸ್ಥಾನದ ಅಸ್ರಣ್ಣರ ಆಡಳಿತ ವೈಫಲ್ಯದ ಬಗ್ಗೆ ಹಾಗೂ ಅಲ್ಲಿಯ ದೇವಸ್ಥಾನದ ವಿಧಿವಿಧಾನ, ಹಣಸಂದಾಯದ ದುರುಪಯೋಗ, ಮತ್ತಿತರ ಅವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ಯೂಟ್ಯೂಬ್ ಪಬ್ಲಿಕ್ ಮಿರರ್ ಚಾನೆಲ್ ಮುಖಾಂತರ ಪ್ರಸಾರ ಮಾಡಿ ಕಟೀಲು ದೇವಸ್ಥಾನದ ಪ್ರಖ್ಯಾತಿ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ವಸಂತ ಗಿಳಿಯಾರ್, ಸಂಜೀವ ಮಡಿವಾಳ, ಮತ್ತು ಅನಂತ ರಾವ್ ರವರ ಮೇಲೆ ಮೂಲ್ಕಿ ಪೊಲೀಸ್ ಠಾಣೆ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ರಾಜೇಶ್ ಕೊಟ್ಟಾರಿ ಮತ್ತು ಗಣೇಶ್ ಶೆಟ್ಟಿ ಅವರು ದಾಖಲಿಸಿದ್ದು, ಮಾನ್ಯ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ವಾದವನ್ನು ಆಲಿಸಿ ಯಾವುದೇ ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದಿಲ್ಲವೆಂದು ಪರಿಗಣಿಸಿ ಎರಡು ಪ್ರಕರಣಗಳಲ್ಲಿಯೂ ನಿರೀಕ್ಷಣಾ ಜಾಮೀನನ್ನು ಮೂವರು ಆರೋಪಿತರಿಗೆ ಆದೇಶಿಸಿರುತ್ತಾರೆ. ಆರೋಪಿತರ ಪರವಾಗಿ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್.ಪಿ ಏಳಿಂಜೆ, ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.
09 Jul 2020, 08:37 PM
Category: Kaup
Tags: