ಕಾಪು ಆಟಿ ಮಾರಿಪೂಜೆ ಸಾರ್ವಜನಿಕರಿಗೆ ದೇವಳ ಪ್ರವೇಶ ಸಂಪೂರ್ಣ ನಿಷೇದಿಸಲಾಗಿದೆ
ಕಾಪು ಶ್ರೀ ದೇವಿಯ ಸನ್ನಿಧಿಯಲ್ಲಿ ವಾಡಿಕೆಯಂತೆ ನಡೆಯುವ ಕಾಲಾವಧಿ ಆಟಿ ಮಾರಿಪೂಜಾ ಜಾತ್ರೆಯನ್ನು . ಕೋರೋನ ನಿಯಂತ್ರಣ ಸರಕಾರದ ಆದೇಶದ ಮೇರೆಗೆ , ಸಾರ್ವಜನಿಕ ಸಭೆ ಸಮಾರಂಭ,ಜಾತ್ರದಿಗಳನ್ನು ಆಚರಿಸಲು ನಿರ್ಭಂಧ, ನಿತ್ಯ ರಾತ್ರಿ ಕರ್ಫ್ಯೂ ಜಾರಿ ಇರುವ ಕಾರಣ..... ತಾ.28/07/20 ಹಾಗೂ 29/07/20 ಜರಗಬೇಕಾಗಿದ್ದ ಆಟಿ ಮಾರೀಪೂಜಾ ಜಾತ್ರೆಯನ್ನು ಸುರಕ್ಷತೆಯ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ... ಈ ಕಾರಣ ನಾಳೆ ಹಾಗೂ ನಾಡಿದ್ದು ಶ್ರಿ ದೇವಿಯ ಸನ್ನಿಧಿಯಲ್ಲಿ ಆಟಿ ಪೂಜಾ ಕೈಂಕರ್ಯಗಳು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಕೇವಲ ದೇವಳದ ಅರ್ಚಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು..... ಈ ಸಂದರ್ಭ, ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವಳ ಪ್ರವೇಶ, ದೇವರ ಭೇಟಿ ಇತ್ಯಾದಿಗಳಿಗೆ ಸಂಪೂರ್ಣ ನಿಷೇಧ ನಿಯಮಾವಳಿ ರೂಪಿಸಲಾಗಿದೆ... ಈ ಪ್ರಯುಕ್ತ ಸರ್ವ ಭಕ್ತ ಭಾಂಧವರ ಸಹಕಾರವನ್ನು ಕೋರಲಾಗಿದೆ.
ಸರ್ವ ಭಕ್ತರು ನಾಳೆ, ನಾಡಿದ್ದು ತಾವು ತಮ್ಮ ತಮ್ಮ ಮನೆಯಲ್ಲೇ ಶ್ರೀ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಹರಕೆ, ಕಾಣಿಕೆ , ಸೇವೆ ಇತ್ಯಾದಿಗಳನ್ನು ಮುಂದಿನ ದಿನಗಳಲ್ಲಿ ಅಥವಾ ಮುಂಬರುವ ಜಾರ್ಧೆ ಮಾರಿಪೂಜಾ ಜಾತ್ರೆ ಸಂದರ್ಭದಲ್ಲಿ ಸಮರ್ಪಿಸಲು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9886620944
9844559928
ಆಡಳಿತ ಮಂಡಳಿ
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ,ಕಾಪು
