ದೈವಾರಾಧಕರ ಒಕ್ಕೂಟದಿಂದ ಕಾರ್ಕಳ ಶಾಸಕರಿಗೆ ಮನವಿ
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಹಾಗೂ ಕಾಪು ಘಟಕ ವತಿಯಿಂದ ಕಾರ್ಕಳ ವಲಯ ಶಾಸಕರಾದ ಸುನೀಲ್ ಕುಮಾರ್ ಅವರಿಗೆ ಉಡುಪಿ ಜಿಲ್ಲಾ ಸಮಸ್ತ ದೈವ ಚಾಕ್ರಿ ವರ್ಗದವರ ಮನವಿಯನ್ನು ಕೊಡಲಾಯಿತು.
ಮನವಿಯಲ್ಲಿ ದೈವ ಚಾಕ್ರಿ ವರ್ಗದವರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತು ಹಾಗೂ ಕೋರನ ದ ತುರ್ತು ಸಂದರ್ಭದಲ್ಲಿ 150 ಜನರ ಒಳಗೆ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮ, ನೇಮೋತ್ಸವ, ಮಾರಿಪೂಜೆ, ದರ್ಶನ ಸೇವೆ, ಹಾಗೂ ಇತರ ಸೇವೆಗಳಿಗೆ ಸರ್ಕಾರದಿಂದ ಅನುಮತಿ ಕೊಡಬೇಕಾಗಿ ಮನವಿಯನ್ನು ಸಲ್ಲಿಸಿರುತ್ತಾರೆ. ನಂತರ ಶಾಸಕರು ಮನವಿಯನ್ನು ಪರಿಶೀಲಿಸಿ ನಿಮ್ಮ ಸಮಸ್ಯೆಗೆ ಡಿಸಿ ಅವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡುತ್ತೇನೆ ಹಾಗೂ ಅಗಸ್ಟ್ ತಿಂಗಳಿನಲ್ಲಿ ದೈವಾರಾಧನೆ ಪಾರಂಭ ಮಾಡುವ ಹಾಗೆ ಪ್ರಯತ್ನ ಮಾಡುತ್ತೇನೆ ಎಂದು ಎಲ್ಲಾ ಸದಸ್ಯರಿಗೆ ಧೈರ್ಯ ತುಂಬಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ರಾಘವ ಸೇರಿಗಾರ್ಪ್ರ, ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಅನಿಶ್ ಕೋಟ್ಯಾನ್, ದಯೆಶ್ ಕೋಟ್ಯಾನ್ ಕಾರ್ಕಳ, ಘಟಕದ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಸದಾನಂದ ಸಾಲಿಯಾನ್, ಕೋಶಧಿಕಾರಿ ಸುಧೀರ್ ಪೂಜಾರಿ, ರಾಜೇಶ್ ಪೂಜಾರಿ, ಸಚಿನ್, ಪವನ್ ಮಡಿವಾಳ ಮತ್ತು ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
