ಹೆಜಮಾಡಿಯಲ್ಲಿ ಸೌಹಾರ್ದತೆಯ ಸಂಕೇತವಾಗಿ ಬಕ್ರೀದ್ ಆಚರಣೆ
Thumbnail
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ‌ನಿನ್ನೆ ಬಕ್ರೀದ್ ಹಬ್ಬ ವನ್ನು ರೋಟರಿ ಸದಸ್ಯರಾದ ಸ್ಯಯದ್ ಹೆಜಮಾಡಿಯವರ ಮನೆಯಲ್ಲಿ ಆಚರಿಸಲಾಯಿತು. ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ ಎಂದು ತಿಳಿಸಿದರು. ನಂತರ ಇಂತಹ ಕಾರ್ಯಕ್ರಮ ನಡೆಸುವುದು ಸೌಹಾರ್ದತೆಯ ಸಂಕೇತ ಎಂದು ಸ್ಯಯದ್ ಹೆಜಮಾಡಿ ಯವರು ಮಾತನಾಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಈ ಬಂದವರನ್ನು ಸ್ವಾಗತಿಸಿ ಅಧ್ಯಕ್ಷತೆಯ ಮಾತನ್ನು ಮಾತನಾಡಿದರು, ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿದರು, ಸುಧಾಕರ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು
01 Aug 2020, 02:41 PM
Category: Kaup
Tags: